"ಸಂಪಿಗೆ"
ಕಣ್ಣ ತುಂಬೋ
ನೂರಾರು
ಹೂಗಳಿದ್ದರೂ
ಸಂಪಿಗೆಯೊಂದು ಸೆಳೆವುದು
ಅಷ್ಟೂ ಘಮಲೊಳು
ಅವಳೇ ನನ್ನ ನಿರೀಕ್ಷೆ
ಗಾಢವೇ ಆದರೂ
ನನ್ನಷ್ಟೂ ಗಮನವ
ಹೊತ್ತೊಯ್ವಳು ಕಂಪ ಸೂಸಿ
ಅವಳೇ ನನ್ನ ಭರವಸೆ
ಈ ತಂಪಾದ ಹೊತ್ತಿಗೆ
ಮಲ್ಲಿಗೆಯ ಮೀರಿಸಿ
ಬಂದಳು ಮನಸಿಗೆ
ಮನೆಯ ಹಿಂದಿನ ಮರದ ಆ ಸಂಪಿಗೆ..
ರೆಂಬೆ ಕೊಂಬೆಗಳಲ್ಲೇ ಜೀಕಿ
ಆರಿಸುತ್ತಿದ್ದ ಮೊಗ್ಗುಗಳು
ಈಗ ನೆನಪಿಗೆ
ಮುಂದೆ ನನ್ನ ಕನಸಿಗೆ ...
31/04/2015
No comments:
Post a Comment