ಹೊಳೆಯದ ರಾತ್ರಿ ಆಕಾಶಕ್ಕೆ
ಅಸಂಖ್ಯಾತ ನಕ್ಷತ್ರಗಳ ಮಿನುಗು
ಸೂರ್ಯನಿಲ್ಲದೆ ನಶೆಯೇರಿ ನಕ್ಕ ನಿಶಿ
ಚಂದ್ರನೂ ತೇಲಿದ ಅದೇ ಕಪ್ಪೊಳು
ಇದು ರಾತ್ರಿ; ರಹಸ್ಯಗಳ ಬಿಚ್ಚುಗನಸು!
05/05/2015
****
'ನಂಬು...!'
ನೀ ಕಾಡಿಸುವಾಗ
ಹುಟ್ಟುವ ಪದ್ಯಗಳು
ನೀ ಪ್ರೀತಿಸುವಾಗ
ಮೌನವಹಿಸಿವೆ..
ಪದಗಳಲ್ಲಿ ತುಂಬಿ
ವ್ಯಕ್ತಪಡಿಸಲಾರೆ
ಈ ಹೊಸ ರೀತಿ!..
04/05/2015
****
ನಾನಂದುಕೊಂಡಂತಲ್ಲ
ಈ ಹುಡುಗ
ಕರಗಲಿ ಪ್ರೀತಿ ಮಧುವು
ತುಂಬಿಕೊಳ್ಳೊಣವೆಂದೆ
ಹರಿದ ರಭಸಕೆ
ನಾನೋ ಬಿದ್ದೆ
ಇನ್ನೂ ಧುಮುಕುತ್ತಿದ್ದಾನೆ
ನಾನೀಗ ನಿಲ್ಲದಾದೆ
ಇನ್ನೂ
ನನ್ನದೆಲ್ಲಿಯ ಸದ್ದು
ಈ ನಡುವೆ...
04/05/2015
****
ಮಳೆಯೆಂದರೆ
ಅವನಲ್ಲಿ ಧುಮುಕಿ
ಹರಿದುಬಿಡುವ ಹರಕೆ
ಈ ಯೌವ್ವನದ ತೊರೆ!
02/05/2015
No comments:
Post a Comment