ಘಮ
ಮಳೆಗೇನೋ ನಿನ್ನ ಘಮವ ಸೇರಿಸಿದ್ದೆ
ಗುಡುಗಿಗೂ ನಿನ್ನದೇ ಸದ್ದೇ..?!
ನಿನ್ನ ನೆನೆಯದ ಕಾರಣವೇ ಇಲ್ಲವೆಂದಾಗಿದೆ
ಮರೆತರೆ ತಾನೆ ನೆನಪು... ?!
ಎಲ್ಲಿರುವೆ ...?!
ಮಳೆಯಲೋ
ಸದ್ದಲೋ ಇಲ್ಲ
ನೆನಪಲೋ..
ಮಣ್ಣ ಘಮವಾಗಿ
ಮಳೆಯ ಸದ್ದಾಗಿ
ತೂರಿ ಬರುವ ತಂಗಾಳಿಗೆ ಮೂಲವಾಗಿ
ಎಲ್ಲಿ ನಿಂತೆ ಈ ಹೊತ್ತು
ನನಗಿಲ್ಲಿ ನಿನ್ನ ನಿಲ್ಲದ ಮಳೆಯ ಮಾತ ನೆನಪು..
29/04/2015
No comments:
Post a Comment