"ಮಳೆ"
ಈ
ಮಳೆಯ ಆಹ್ಲಾದಕೆ
ಸೋತು
'ಜೊತೆ ನಡೆಯೋ ಹುಡುಗ'
ಎಂದರೆ
ಭಯವೆನ್ನುತ್ತಾನೆ
ಈ
ಬಿರುಸು ಮಳೆಯದೋ
ಆಲಿಕಲ್ಲಿನದೋ
ಮಿಂಚು ಗುಡುಗಿನದೋ
ಇಲ್ಲ
ನನ್ನದೋ?!
ಪಾಪ ಹುಡುಗ
ಮಳೆಯ ಗಾಳಿಗೆ
ಬೆದರಿ,
ಮರೆಯಲೇ ನಿಂತ..
ಆದರೂ ಬಿಡದ ಮನ
ಅವನ ತೋಯ್ಸಿಯೇ ಬಿಟ್ಟಿತು
ಈ ಪ್ರೀತಿ ಮಳೆಯಲಿ!
23/04/2015
No comments:
Post a Comment