ಬಹುಶಃ ದುಃಖಿಸಲಾಗದ
ಸ್ಥಿತಿಗೆ
ಬುದ್ಧಿವಂತರು
'ಛಲ'
ಎಂದುಬಿಟ್ಟರೇನೋ
ಹೀಗೆ
ಹುರಿದುಂಬಿಸಲು...
ಹೊಗಳಿಕೆ
ಯಾರಿಗಿಷ್ಟವಿಲ್ಲ ಹೇಳಿ?!
********
ಹರವಿಟ್ಟಷ್ಟು ಸುಲಭವಲ್ಲ
ಕಟ್ಟಿ ಹಿಡಿವುದು
ಈ ಮನಸ್ಸು..
ಹೆಜ್ಜೆಗಳು ತುಳಿದಾಡದಿರಲಿ
ಕಾಲಿಗೇ ಸಿಕ್ಕಂತೆ ಬಾಗಿರಲು ...
******
ಕುಸುರಿ ಕೆಲಸ ಬೇಕು
ಚೆಂದಕೆ!
ಅತೀ ಕುಸುರಿಯಾದರೆ
ಕೆಲಸವದು ತೊಂದರೆ!
******
ಎಷ್ಟು ಜಾಗರೂಕತೆಯ ಬೇಲಿಯಿತ್ತೋ
ಈ ಹಸಿಯಾದ ಹೃದಯಕೆ
ಕೊನೆಗೂ
ಒಂಟಿ ಉಳಿಯದಾಯ್ತು ....
11/05/2015
No comments:
Post a Comment