Thursday, 28 May 2015

ಕವನ

ಕನಸಿನಲ್ಲಿ ನಡೆದಾಡಿದಂತೆ
'ಈ ಋತುಮಾನ';
ಅದೇನೋ ಹೇಳಲಾರದ ಉನ್ಮಾದ
ಮುಂಜಾನೆಯ
ಹೀಗೊಂದು ಅನಿಸಿಕೆ .

ಎಚ್ಚರಗೊಳ್ಳದ ಮಂಪರು
ತೇಲಿ ಹೋದಂತೆ ಹೃದಯ
ಹಸಿ ನೆನಪುಗಳಲಿ;
ಸವಿಗನಸುಗಳಲಿ..

ಪ್ರತಿ ದಿನದ ಸಂಗಾತಿ
ಈ ಮಳೆ, ಮೋಡ, ಹಬೆಯೊಳಗೆ
ಕರಗಿ ಹರಿಯಲಿ ಹೆಪ್ಪಿಗಟ್ಟಿದ
ನವಿರು ಭಾವಗಳು

ಸಂಕೋಚಗಳ ಗಡಿ ದಾಟಿ
ಪ್ರೀತಿ ಮೇರೆಯನೇ ಮೀರಿ
ಅರಳಲಿ ಹೂಗಳು
ಹಿಡಿದ ಬೊಗಸೆ ತುಂಬಾ
ಭರವಸೆಗಳೇ ಹೊಮ್ಮಿ!

ಏನು ಹೇಳಿದರೂ
ಮತ್ತೂ ಉಳಿವ ಮಾತುಗಳು
ಅಂತ್ಯ ಹಾಡಲಾರದೆ
ನಾ ಉಳಿಯಲು
ಮತ್ತೆ ಮತ್ತೆ ನಿನ್ನ ಭೇಟಿಯೇ ಸಾಂತ್ವಾನ
ನಂಬು ನನ್ನ ಕನಸೇ,
ನನ್ನ ಮಾತೇ ಮುಗಿಯದು..!

20/05/2015

No comments:

Post a Comment