Thursday, 7 May 2015

ಕವನ

ಅವನೇ ನನ್ನನು ಆವರಿಸಿ


ಗಂಧವನ್ನೇ
ಮುಚ್ಚಿಟ್ಟುಕ್ಕೊಂಡೆ ಸೆರಗಿನಲಿ
ಗಾಳಿ ಬಳಿ ಸಾರಿ ಸವೆದು 
ಹೊತ್ತೊಯ್ಯಿತು ಸುಗಂಧವಾಗಿ

ಹೃದಯವ 
ಮುಚ್ಚಿಟ್ಟೆ ಕೋಪದಡಿ
ನಗುವೇ ಎರಗಿ 
ದೋಚಿ ಹೋಯ್ತು 
ನಾನು ಖಾಲಿ ಖಾಲಿ

ಕನಸನು 
ಮುಚ್ಚಿಟ್ಟೆ ರಾತ್ರಿಯ ಕತ್ತಲ್ಲಲ್ಲಿ
ಬೆಳಕೇ ಹರಿದಾಡಿ 
ಹುಡುಕಿಕೊಂಡಿತು 
ನನ್ನನು ನಿದೆರೆಗೆ ತಳ್ಳಿ

ಅವನನ್ನು
ಈಗ ಬಚ್ಚಿಟ್ಟುಕೊಳ್ಳುವ 
ಪ್ರಯತ್ನದಲ್ಲಿ
ಅವನೇ ನನ್ನನು ಆವರಿಸಿ 
ನಾನೋ ಚಿಟ್ಟೆ ಅವನೆದೆಯಲಿ...

28/04/2015

No comments:

Post a Comment