ಆ ದೇವನ ಪಾದಕ್ಕೆ ಅರ್ಪಿಸಿದ್ದ
ಎನ್ನ ಮನೋಭಿಲಾಷೆಯ ಹೂಗಳನ್ನು
ಯಾರೋ ಎಳೆದು
ಹೊಸಕಿ ಬುಟ್ಟುಗೆಸೆದರಲ್ಲ
ಅವರು ತಂದ ಬುಟ್ಟಿಯಲ್ಲೂ
ಹೂಗಳಿದ್ದವು
ನೊಂದು ಹೊರಟೆನಷ್ಟೆ ತಿರುಗಿ ನೋಡದೆ...
17/04/2015
****
ನೀನೇ ಕನಸಾಗುತ್ತಿರುವೆ
ಮತ್ತೆ ಇನ್ನೆಂತ ಕನಸು
ನೀನು ಆಶಿಸುವುದು ಎನಗೆ?!! ...
****
ನೂರು ವರ್ಷಗಳ ಪ್ರೀತಿ ಬೇಡ
ಏನನ್ನೂ ಬಯಸದೆ
ಸುಮ್ಮನೆ
ಒಂದಷ್ಟು ಹೊತ್ತು
ನಾವು ಅವರಿಗಾಗಿ; ಅವರು ನಮಗಾಗಿ
ಬದುಕಿಬಿಡುತ್ತೇವಲ್ಲಾ..
ಅದಷ್ಟು ಸಾಕು ಉಸಿರಾಡಲು
ಪಡೆಯದಿದ್ದರೂ ದೂರವಿದ್ದರೂ
ತುಂಬಿಕೊಂಡಂತೆ ಹೃದಯ
ಸದಾ ಹಸನ್ಮುಖಿ ಮನಸ್ಸು
****
ಪದಗಳಲ್ಲಿ ಕಟ್ಟಲಾಗದ
ಪ್ರೀತಿಯಿದ್ದರೆ
ಬಹುಶಃ ಅದಕ್ಕೆ
ಶಬ್ಧವೇ ಇಲ್ಲ..
ಮೌನದ ಕಣ್ಣೀರೇ
ಎಲ್ಲಕೂ ಉತ್ತರ
ಕಳೆದ ರಾತ್ರಿ
ತುಂಬಾ ಹೊತ್ತು
ನಿಜ ಪ್ರೀತಿಯ
ಅನುಭವಿಸಿದ್ದೆ..
ಒಬ್ಬಳೇ ನಕ್ಷತ್ರಗಳಡಿಯಲಿ..
16/04/2015
****
ದಿನದಲ್ಲಿ ಹೆಚ್ಚು ಕನಸು ಕಂಡು
ಹೆಚ್ಚು ನಿದ್ದೆ ಮಾಡಿದೆ
ಈಗ ರಾತ್ರಿಯ ನಿದ್ದೆ ಕಳೆದಿದೆ
ಹುಡುಕೋಣ ಬಾ
ಸಿಕ್ಕರೆ ನಿನಗೂ ಹಂಚುವೆ!
ನಿನಗೆ ಹೆಚ್ಚಾದರೆ
ಸಮ ಸಮವಾಗಿ ಹಂಚಿಕೊಳ್ಳೋಣ
ನಿದ್ದೆಯನ್ನು; ಮಿಕ್ಕಂತೆ
ಆ ನಕ್ಷತ್ರಗಳನ್ನು
ನಿದ್ದೆ ಖಾಲಿಯಾಗಿ ರಾತ್ರಿ ಉಳಿದರೆ!
15/04/2015
No comments:
Post a Comment