ಬರೆಯದ ಹಾಳೆಗಳು
ಈ ಬರೆಯುವ
ಹಾಳೆಗಳು
ಕಾಲಕ್ಕೆ ತಕ್ಕಂತೆ
ತುಂಬುವುದೇ ಇಲ್ಲ
ಬಾಕಿಯುಳಿದುಬಿಡುವವು;
ಇಲ್ಲವೇ
ಬಳಕೆಯೇ ಆಗದೆ..
ಅಷ್ಟೂ ಕಂತು
ಅಂತೂ
ಕಾಲವಂತೂ ಉರುಳಿದೆ
ಕಾಗದಗಳ ನಡುವೆ
ಆಯ್ದು ಕೆಲ ಅಕ್ಷರಗಳ
ಕಳೆದು ಎಷ್ಟೋ ಒಗಟುಗಳ..
ಉಳಿದದ್ದೇ ಜೀವನ
ಓಡಿದ್ದೆ ಬದುಕು..
ಏನೋ ಒಂದರ್ಥ
ಕೊನೆಗೂ ಅಂಕಿತ!
07/05/2015
No comments:
Post a Comment