Thursday, 7 May 2015




ಈಗೆಲ್ಲಾ
ನಿನ್ನ ಬಿಟ್ಟು
ಬೇರೆ ಆಲೋಚನೆಗಳೇ ಇಲ್ಲ
ಪುಟ ತಿರುವಿ ನೋಡಿದೆ
ನನ್ನ ದಿನಚರಿಯಲ್ಲಿ
ಅಪ್ಟೇಡ್ ಆಗದ ಬಹಳಷ್ಟು ಕಾಲಂಗಳು
ಈಗ ಅರ್ಥವಾಗಿದೆ
ನನಗೆಷ್ಟು ಸಮಯವಿತ್ತು
ಕೆಲಸವೂ
ಈಗ 
ಅವೆಲ್ಲವೂ ನೀನಾಗಿದ್ದು
ದಿನ ರಾತ್ರಿಗಳೆಲ್ಲಾ
ಸಣ್ಣವು.. !!

27/04/2015

****

ಈ ಸಂಬಂಧಗಳಲ್ಲಿ 
ನಾನು ಮತ್ತು 
ನನ್ನ ಮಾತು 
ಅಪಾರ್ಥವಾದೊಡೆ
ಗೊತ್ತಿದ್ದೂ ಸುಮ್ಮನಿದ್ದುಬಿಡುವ
ವಾದಿಸಲು, ನಿರೂಪಿಸಲು
ನನಗೊ ಭಾರಿ ಕಷ್ಟ!
ತನ್ನನು ತಾ ನಿರೂಪಿಸುವುದಕ್ಕಿಂತ
ಮತ್ತೊಂದು ಶಿಕ್ಷೆಯಿಲ್ಲ...
ಈ ಆತ್ಮೀಯರಲ್ಲಿ..
ನಾನು ಹಾಗಲ್ಲ; ಹೀಗೆ..!!

*****

ಬಹುಶಃ
ಒಳ್ಳೆಯತನದಿಂದ
ಸಂಕಷ್ಟಗಳು ಪರಿಹಾರವಾಗಬಹುದು
ಒಂದಷ್ಟು ಹರಿದು ಹೋಗಬಹುದು
ಅವರಿವರ ಪ್ರೇರಣೆಗೆ
ಮತ್ತಷ್ಟು ಉಳಿದುಕೊಳ್ಳಬಹುದು
ಪ್ರೇರಿತವಾಗಿ
ಮತ್ತು
ಕೇವಲ
ನನ್ನವಾಗಿ... !!!

26/04/2015


*****

ತಿರಸ್ಕರಿಸಿ 
ಸದ್ದಿಲ್ಲದೆ
ನನ್ನ ನಿಟ್ಟುಸಿರ ಸದ್ದೂ
ನಿಮಗೆ
ಕೆಳದಷ್ಟು 
ದೂರ ನಾನು..!

*****

ಒಣಗಿದ ಭಾವಗಳ ನೀರು ಚಿಮುಕಿಸಿ
ಮೊಳಕೆಗೆ ಬಿಟ್ಟಂತೆ
ಕಟ್ಟಿರುವೆ ತನುವಿನೊಳು
ಮುಚ್ಚಿಟ್ಟು..
ಇನ್ನೇನು ಮೊಳಕೆಯು ತೂರಿ ಬರುವುದು
ನನ್ನಂಕೆಯ ಮೀರಿ
ನೀವೂ ನೋಡಿರಿ...

****

ಎಷ್ಟೊಂದು ಆತಂಕಗಳು
ಆಸೆಯ ಕೈ ಹಿಡಿಯಲು
ಸಡಿಲವಾದ ಬಂಧ
ಎಂದಿಗೂ ಸ್ವಂತ
ಹೂವು ಹಕ್ಕಿಯಂತೆ
ಅರಳಿ ಹಾರಲು
ಅಂಗಳದಲಿ......!

25/04/2015

No comments:

Post a Comment