ವೃತ್ತ....
ಒಂದು ವೃತ್ತದಲ್ಲಿ
ನಿಂತಾಗ
ನಾನು ಹೊರಗೆ ಮುಖ ಮಾಡಿ
ಪ್ರಕೃತಿಯೊಳು
ಒಬ್ಬಳೆ ನಿಂದೆ
ಅವನು ಒಳಗೆ ಮುಖ ಮಾಡಿ
ಜನರೊಟ್ಟಿಗೆ
ಸಂಚರಿಸುತಾ ನಿಂದನು
ಗೊತ್ತಿತ್ತು ಪರಸ್ಪರ
ಯಾರೆಲ್ಲಿ
ನಿಂದರೆಂದು
ಅವನು
ನನ್ನೆದುರೇ ಇದ್ದ
ನಾನು
ಅವನೆದುರೇ ಇದ್ದೆ...
ನಡುವೆ ನಾಚಿಕೆ
ನೋಡುತಾ ನಿಂತಿತು
ನಮ್ಮಿಬ್ಬರನು...
10/05/2015
No comments:
Post a Comment