Thursday, 7 May 2015

ಕವನ

ದೌರ್ಬಲ್ಯವಲ್ಲ...



ಹಿರಿತನಕೆ ತಲೆ ಬಾಗುವೆ
ಅದು ನನ್ನ ದೌರ್ಬಲ್ಯವಲ್ಲ

ಙ್ಞಾನಕ್ಕೆ ಶರಣಾಗುವೆ
ಹಕ್ಕು ಬಿಟ್ಟ ಲಕ್ಷಣವಲ್ಲ

ಪ್ರೀತಿಗೆ ಕರಗುವೆ
ಸ್ವಭಾವವಲ್ಲ

ತಿರಸ್ಕಾರಕ್ಕೆ ಕಣ್ಣೀರಾಗುವೆ
ಪ್ರತೀ ಬಾರಿಯಲ್ಲ

ಕೆಡುಕಿಗೆ ಮೌನವಹಿಸುವೆ
ಅದೇ ಅಂತಿಮವಲ್ಲ

ಸದಾ ಸೋಲಿಸೊ ಕ್ರೂರತೆಗೂ 
ಎದೆಯೊಡ್ಡುವೆ

ಗೆಲ್ಲುವ ಹಟ್ಟಕ್ಕಲ್ಲ, 
ಸಹಿಸಿ ನಿಲ್ಲುವ ಛಲವೇ ಎಲ್ಲಾ..

23/04/2015

No comments:

Post a Comment