ಕಾವ್ಯ
ಬಸಿದುಕೊಂಡ ಕಣ್ಣೀರೆಲ್ಲಾ
ಮತ್ತೆ ಹೊರಳಬಹುದೆ
ಪ್ರೀತಿ ಪನ್ನೀರಿನೆಡೆಗೆ!
ಅಳಿದು ಹೋದ ಭರವಸೆಗಳೆಲ್ಲಾ
ಮತ್ತೆ ಅರಳಬಹುದೆ
ಬಯಕೆ ಬೆಸುಗೆಯೆಡೆಗೆ
ಬಿಸುಟುಕೊಂಡ ಬಂಧವೆಲ್ಲಾ
ಮತ್ತೆ ಅರ್ಥ ಪಡೆಯಬಹುದೆ
ತಿಳಿಗೊಂಡ ಭಾವಗಳೆಡೆಗೆ
ಕಮರಿದ ಕನಸೆಲ್ಲಾ
ಮತ್ತೆ ಕೊನರಬಹುದೆ
ಕಣ್ಣು ಬಿಂದುವಿನ ಹೊಳಪಿನೆಡೆಗೆ
ಲಯವಿಲ್ಲದ ಹೃದಯ ಮಿಡಿತ
ಮತ್ತೆ ಲಂಗಿಸುವುದೇ
ಪ್ರೇಮ ಕವಿತೆಯ ಸಾಕ್ಷಿಯೆಡೆಗೆ
ಮೌನವಹಿಸಿದ ಮಾತುಗಳೆಲ್ಲಾ
ಮತ್ತೆ ಮೊಳಗಬಹುದೇ
ಮುತ್ತು ಪೋಣಿಸುವುದರೆಡೆಗೆ
ಕೊಂದ ನಿರೀಕ್ಷೆಗಳೆಲ್ಲಾ
ಮತ್ತೆ ಹಸಿರಾಗಬಹುದೇ
ನೆಮ್ಮದಿಯ ಸುಖದೆಡೆಗೆ
ಒಂಟಿತನದ ಜೀವ
ಮತ್ತೆ ಹುರುಪುಗೊಳ್ಳಬಹುದೇ
ತಿರಸ್ಕಾರಗಳ ಮೀರುತ ಗುಂಪಿನೆಡೆಗೆ
ಕಳೆದು ನಿಂತ ಕೈಗಳೆಲ್ಲಾ
ಮತ್ತೆ ಚಪ್ಪಾಳೆ ಚಿಟಿಕೆಗಳಾಗಬಹುದೇ
ಹೊಸತು ಉತ್ಸಾಹದೆಡೆಗೆ
ಕಣ್ ಕಿವಿ ಬಾಯ್ ಮುಚ್ಚಿದ ಜನರೆಲ್ಲಾ
ಮತ್ತೆ ನಕ್ಕು ಕುಣಿಯಬಹುದೇ
ಹಳದಿ ಪೊರೆ ಹರಿದ ಕಣ್ಗಳೆಡೆಗೆ
ನಿರಾಶ್ರಿತ ಮನವೆಲ್ಲಾ
ಮತ್ತೆ ಮನದೇಗುಲಗಳಾಗಬಹುದೇ
ಇಂಚಿಂಚು ಅಗೆದು ಬದುಕಿನೆಡೆಗೆ
ಮರುಗಟ್ಟಿದ ತನುವಿನೊಳಗೆ
ಒಮ್ಮೆ ನಲುಗಬಹುದೇ ಉಸಿರು
ಮಡಿಲ ತುಂಬುವ ಹೊಸ ಕಾವ್ಯದೆಡೆಗೆ!
12/05/2015
No comments:
Post a Comment