Saturday, 9 May 2015

ಸಂತೆಯಲಿ 
ಕೂತು 
ಕಾಯುವುದೆಂದರೆ
ಕಣ್ಣು
ತೂತು 
ಬಿದ್ದಂತೆ!

10/05/2015


****

ತಣ್ಣಗಿದ್ದು
ಒಳಗೊಳಗೇ ಕುದಿವ
ಆತುರವದು
ಏನದರ ಹೆಸರು?
ಮೋಡವಿದೆ ಇನ್ನೂ 
ಮಳೆಯಿಲ್ಲ
ಇಳೆಯೆಲ್ಲಾ ಬೆವರು ಬೆವರು
ಮಣ್ಣ ಗಂಧ
ಅಂತೆಯೇ ಈ ಹವೆಯೂ!


****

ಹೀಗನ್ನದಿರು
ಹಾಗನ್ನದಿರು
ನನಗೆ ನೋವಾಗುವುದು
ಹೀಗೆಲ್ಲಾ ಇನ್ನೆಷ್ಟು
ಬೇಡುವುದು
ಇರಲಿ
ಅದೇನೇನು ಹೇಳುವೆಯೋ ಹೇಳು
ಉಳಿದರೆ
ನಾನು ಹೇಳುವೆ!
ನೋವೇ ಆಗಲಿ ಇಲ್ಲ ನಲಿವೋ... 

08/05/2015

No comments:

Post a Comment