Thursday, 7 May 2015

ಕವನ

ಕಲ್ಪನೆ**


ಬೊಗಸೆ ಹಿಡಿದು 
ತುಂಬಿಕೊಳ್ಳೊ ಪ್ರೀತಿ
ಹೇಗಿತ್ತು?!

ಅಲ್ಲೆರಡು ಕಣ್ಗಳಲಿತ್ತು 
ಬಿರಿದಿತ್ತು
ಪಿಳಿಪಿಳಿಯೆಂದು 
ನನ್ನೇ ನೋಡಿತ್ತು

ಹತ್ತಿರತ್ತಿರಾಗಿ 
ಕಣ್ಣು ಮಂಜಾಗಿ
ಕಿರಿದಾಯ್ತು
ಈಗೇನೂ ನೋಡೆನು
ಬೊಗಸೆ ತುಂಬಾ 
ಪ್ರೀತಿಯೇ ತುಂಬಿತ್ತು
ಅಧರದಲ್ಲೂ ಮೃದುವಾಗಿ 
ಮುದ್ದಾಗಿತ್ತು...

15/04/2015

No comments:

Post a Comment