'ಹೂವಿನಾಟ'
ಮೊದಲಾದರೆ ನಾನೆಸೆವ
ಹೂವೆಲ್ಲಾ ನದಿಯ ನೀರಿಗೆ ಬಿದ್ದು
ಕೆಲ ಕ್ಷಣದ ಅಲೆಗಳೆದ್ದು
ಅಡಗಿಬಿಡುತ್ತಿದ್ದವು ಗುರುತಿಲ್ಲದೆ
ಈಗೆಲ್ಲಾ ಹಾಗಾಗದು
ಹೂವುಗಳ ಜಾಗ್ರತೆಯಲಿ ಹಿಡಿದು
ಮತ್ತೆ ಬಂದೆಡೆಗೆಯೇ
ಬೀಸಿ ಹೊಡೆವ ಹುನ್ನಾರವಿದೆ
ನಾನೀಗ ನೋಡಿ ಆಡ ಬೇಕು
ಈ ಹೂವಿನಾಟವ
ತಪ್ಪಿದರೆ ಬಿರುಸಾಗಿ ಬಂದು
ಎದೆಗೆ ನಾಟುವುದು 'ಹೂವಿನ ಬಾಣ'!
15/05/2015
No comments:
Post a Comment