ಬದುಕು ಹೊಂಬೆಳಕಲಿ,,
ಸುತ್ತಲೂ ಮುಳ್ಳು ರಾಶಿಯೇ?!
ಅಲ್ಲೇ ಧ್ಯಾನಿಸಿ ನೋಡಿ,
ಹಸಿರ ಮರೆಯ ನಗುವ ಗುಲಾಬಿ ...
ಸಾಸಿರ ಕಣ್ ಹೊಡೆವ ನಕ್ಷತ್ರಗಳೇ?
ತುಸು ಸಮಯದ ಸಂಯಮವಿರಲಿ
ಕಾಯುವ ಸೂರ್ಯ ಬರುವನು ಬೆದರಿಸಿ..
ಮತ್ತೆ ಮತ್ತೆ ಅವಮಾನಿಸುವ ಕುಹುಕವೇ?
ಮರೆತು ನಡೆಯಿರಿ ಸವೆಸಿ ಹಾದಿ
ದಣಿವುದು ಕುಹುಕವೂ ಸೋತ ಮಾತುಗಳಲಿ..
ಬಿಡಿಸಿದಷ್ಟೂ ತೊಡರೋ ಬಲೆಯೇ ಈ ಜೀವನ?
ಮೂಡುವುದು ಬೆಳಕು ಕತ್ತರಿಸಲು ತೊಡರು
ಧ್ಯೇಯ ಸ್ವಚ್ಛವಿದ್ದಂತೆ ಬದುಕು ಹೊಂಬೆಳಕಲಿ..
21/04/2015
No comments:
Post a Comment