ಪ್ರೀತಿ ಹೂ ಬನದಲಿ
ಕಾಮದ ಘಮಲನು
ಆತುರದಿ ಹುಡುಕದಿರು
ಹೂ ಬಿಡಲು ಕಾಯಾಗಲು
ಪ್ರೀತಿ ಕಾದಂತೆ
ಮೋಹ ನೀನೂ ಕಾಯಬೇಕು
ಕಾಲ ಪಕ್ವತೆಗೆ
ಭಾವ ಮೊಳೆತು
ಬಯಕೆ ಬೆಸೆದುಕೊಳ್ಳಲು!
*****
ಹುಡುಗನ ಮಾತು
ಜೋಗುಳದಂತೆ
ಮಂಪರು ಹತ್ತಿದರೆ
ನಶೆಯೆಂದಿತು ಜಗ
ನನಗೋ ಭಾರಿ ನಿದ್ದೆ
ಮೈದಡವಿ ಅವನ ಕಾಳಜಿ..
15/05/2015
No comments:
Post a Comment