ನಾ ಕಾಯುವೆ
ಹೀಗೆಯೇ ಬಡಿದು ಹೋಗುವ
ದ್ವೇಷ ಅಸೂಯೆಗಳಿಗೆಲ್ಲಾ
ಎಲ್ಲೂ ಒಂದು ಅರವಟ್ಟಿಗೆಯೇ ಇಲ್ಲವೆ
ತಣಿದು ಬರಲಿ
ನಾ ಕಾಯುವೆ
ಮೊರೆದು ಬರುವ ಅದರ ಹೊಡೆತಕೆ
ಹೀಗೆಯೇ ಬಂದು ಬಿಗಿದಪ್ಪುವ
ಪ್ರೀತಿ ಸ್ನೇಹಗಳಿಗೆಲ್ಲಾ
ಎಲ್ಲೂ ಒಂದು ಕಡಲ ತಾಣವಿಲ್ಲವೆ
ಹರಿದು ಬರಲಿ
ನಾ ಕಾಯುವೆ
ಶರಧಿಗೂ ಮುನ್ನ ನದಿಯ ರಭಸಕೆ
ಹೀಗೆಯೇ ಹರಿದಾಡುವ
ಗೊಂದಲಗಳಿಗೆಲ್ಲಾ
ಎಲ್ಲೂ ಪರಿಹಾರ-ಅಂತ್ಯವಿಲ್ಲವೇ
ಕಳೆದು ಬರಲಿ ಮನವು
ನಾ ಕಾಯುವೆ
ಬಿರುಕು ಬೇಸರಗಳಿಗೆ ಬಿಗಿದು ಶಾಂತಿ ಬೀಗವೆ..
23/04/2015
No comments:
Post a Comment