Thursday, 7 May 2015

ಕವನ

ಸೋಲದ ಕನಸು


ಒಂದು ರಾತ್ರಿ
ಅದೊಂದು ಕನಸಿನೊಂದಿಗೆ
ಮಾತಿಗಿಳಿದೆ
ಎಷ್ಟು ಸೊಕ್ಕು! 
ಸೋಲದ ಕನಸು
ನನ್ನನ್ನೇ ಸೋಲಿಸಿ 
ನಿದ್ದೆಗೆಡಿಸಿದೆ...

ಹಟದಿಂದ ಅದುಮಿಟ್ಟು
ಅದರ ಉಸಿರ 
ಹಿಡಿಯಲೆತ್ನಿಸಿದೆ
ಜಾರಿಕೊಂಡು 
ಒಡೆದ ಪಾದರಸವಾಯ್ತು

ಈಗ ಅಂಗಳವೆಲ್ಲಾ 
ಕನಸುಗಳು
ಕುಣಿಯುತ್ತಲಿವೆ
ಕೈಗೊಂದೂ ಸಿಗದೆ..
ನನ್ನ ಗೆದ್ದು

07/05/2015

No comments:

Post a Comment