ಆಳ
ಆಳವನು
ನಾ ದಾಟಿಯೋ
ಇಲ್ಲ
ಬಳಸಿಯೋ ಸಾಗುವೆಯಾದರೆ
ನನಗಿರುವುದು
ಆಳದ ಕುರಿತು ಜಾಗೃತಿಯಲ್ಲ
ಆಳವೇ ನನಗೆ ನೀಡುವ
'ಎಚ್ಚರಿಕೆ'!
ಆಳದ ಗುರುತೂ ಇದ್ದು
ಆಳದ ಆಳ ಅರಿತಿರುವೆ
ಬಿದ್ದ ಅನುಭವವೂ
ಎದ್ದ ಗಟ್ಟಿತನವೂ
ನನ್ನನಿನ್ನೂ ಬಿಟ್ಟು ಹೋಗಿಲ್ಲ
ಆಳದಲ್ಲೇ ಇದ್ದು
ಹೊರಗೆ ಮುಖವೆತ್ತಿದವಳು
ಇನ್ನು
ಆಳದ ಬಗ್ಗೆ
ಭಯವೋ
ಇಲ್ಲ ಉಡಾಫೆಯೂ
ನನಗಿಲ್ಲ!
ಇದೂ ಆಳದ ಮಾತು
ಅರಿತಾರು ಆಳಕ್ಕಿಳಿದವರು!
11/05/2015
No comments:
Post a Comment