Thursday, 7 May 2015

ಕವನ


ನಿನ್ನಾ ನೆನಪು


ಬೇಸಿಗೆಯ ಮಧ್ಯಾಹ್ನ
ಮೋಡ ಕವಿದ ಮನ
ಬರಡುತನಕೆ 
ಮಳೆಯ ನೆನಪು
ಆವರಿಸಿದಂತೆ ಕನಸು
ಈ ಹೊತ್ತು 
ನಿನ್ನದೇ ಗುನುಗು...

ಮಳೆ ಹನಿದಂತೆ
ಬಿಸಿಲೂ ಚದುರಿ
ಬಣ್ಣದ ಬಿಲ್ಲು
ಈ ಮನದ ಬಾನು
ನೀನು ಬಂದು..

ಈ ಬೇಗೆಯ ದಿನದಲಿ
ನಿನ್ನ ನೆನಪು
ಉರಿದ ಮೊಗದ
ಒಲಿದ ಬಯಕೆ
ಆಸ್ತೆಯ ನೋಟ
ಹೀಗೆ ನಿನ್ನ ನೆನಪು..

ನಾಳೆ ಸಿಗುವೆ
ಗೊತ್ತೆನಗೆ
ಈಗಲೇ ಏಕಿಲ್ಲ
ಎನ್ನುವ ಮನಕೆ
ನೀನೇ ಹೇಳು
ಕಾರಣ ಸಾಂತ್ವಾನ..

ಬಹಳವಾಗಿದೆ ನಿನ್ನ ಹಾವಳಿ
ದಿನದಲಿ ಪ್ರಶ್ನೆ
ರಾತ್ರೀಲಿ ಉತ್ತರ.. 
ದಾಳಿಯಿಡಲು
ನನಗೆ ದಾರಿಯೇ ಮರೆತಿದೆ
ತುಸು ಸಹಕರಿಸಿ ನಡೆಸಿಬಿಡು
ಇನ್ನಷ್ಟು ಅಡಿಗಳ..

ನಿನ್ನಾ ನೆನಪು
ನನಗೀಗ ಹೆಚ್ಚೇ ಕಾಡಿದೆ
ಈ ಹೊತ್ತೇ 
ಅದೆನೋ
ಹುಚ್ಚು..

28/04/2015

No comments:

Post a Comment