ಹೆಚ್ಚಿನ ಅಂತಃಕರಣ
ಮೀರಿದ ಅಪಾರ್ಥಗಳು
ಸಲುಗೆ ಸತ್ತು, ದ್ವಂದ್ವದ ಗಡುವು
ಸ್ವಾರ್ಥಿಗಳಾಗಿಯೇ ಬದುಕುವ
ಸ್ವಾರ್ಥಿ ಎಂಬುದು ಒಂದೇ ಅರ್ಥ!
22/04/2015
****
ಒಮ್ಮೆ ಮರೆಯಾಗು ನೀನು
ನಿನ್ನ ನೆಪದಲಿ ಅದೆಷ್ಟು
ಕಲ್ಲ ಹೊಡೆವುವೆನೋ
ಆ ಮರದ ಕಾಂಡಕೆ
ಚಿತ್ರವಂತೂ ಇಲ್ಲ
ವಿಚಿತ್ರವೊಂದು ಮೂಡಿದೆ
ಅದೂ ನೀನೆ ಎಂದು
ಮನಸ್ಸು ವ್ಯಂಗ್ಯವಾಡಿದೆ
ನೋಡು ಬಾ ಒಮ್ಮೆ,,
ಎಷ್ಟು ಚೆಂದ ಕಾಣುತ್ತಲಿರುವೆ..
*****
ಆ ದಾರಿಯ
ಕೊನೆಯಲ್ಲಿ
ಬಹಳ ಹೊತ್ತು
ನಿಂತು ಕಾದಿದ್ದೆ
ಈಗ ಅಲ್ಲಿ
ಹುಲ್ಲೇ ಇಲ್ಲದಂತೆ
ಬರಡು
ಆ ಕೊನೆ
ಅದೇ ಕೊನೆ...
21/04/2015
No comments:
Post a Comment