ಒಂದೇ ಮುತ್ತಾ?!
ಎಂದರೆ
ಜೊತೆಗಷ್ಟು ಪ್ರೀತಿ
ಎನ್ನುವ ಪ್ರೇಮಿ
ಕಣ್ಣೊಳಗೆಯೇ
ಕವಿತೆ ಕಟ್ಟುವ ಕವಿ
ಆ ಹೊತ್ತು
ಮನದೊಳಗೆ
ಸಾಸಿರ ಸೂರ್ಯರ
ಮುಂಜಾವು...!
*********
ಹೃದಯ ಹೂ
ಮಿಡಿಯದೆ ಮುದುಡುವಾಗಲೂ ನೋವಿತ್ತು
ಒತ್ತಿಕ್ಕೊಂಡು ತೇವ ಇಂಗಿ;
ಅದೇನೋ ಆಗಿ ಮತ್ತೆ
ಅರಳಿ ಹೊಮ್ಮುವಾಗಲೂ ನೋವಿದೆ
ಸಡಿಲಿಸುವಾಗ ಮಡಚಿಕೊಂಡ ಪಕಳೆಗಳಲಿ...
26/05/2015
***********
ಕೈ ಹಿಡಿದ ಪ್ರೀತಿ
ಮುತ್ತಾಗಿ ಬಂದಿರಲು
ಎಲ್ಲಿಯೇ ಸುತ್ತಿದರೂ
ನೆನಪಾಗಿ ಕಾಡುವದು
ಗಾಣಕ್ಕೆ ಕಟ್ಟಿದ ಎತ್ತಿನಂತೆ
ಮೋಜಿನಿಂದ ಅಲೆದಲೆದು
ಮತ್ತೂ
ಅವನಲ್ಲೇ ನಿಲ್ಲುವುದು ಮನಸ್ಸು!..
*******
ಜೀವನ ನಡೆದಂತೆ
ಎನ್ನುವಾಗ
ನಡೆಸಲು ನನ್ನದೇನೂ
ಅಭ್ಯಂತರವಿಲ್ಲ
ನಡೆಯುವಾಗ
ದಾರಿ ತುಸು ಉದ್ದವಿರಲಿ
ಪ್ರೇಮವಾಗಲಿ
ನಡೆನಡೆದು
ದಾರಿಗೂ ಎನ್ನ ಮೇಲೆಯೇ...
ಈ ದಾರಿ ಭಾರಿ ಕಾಡಿದ್ದು
ಕಾಡುತ್ತಲೇ ಉಳಿಯಲಿ
ಕಾಡು ಮತ್ತು ಹಾದಿ
ಹೂವನ್ನರಸುವ ಸಾಧನವಾಗಲಿ
ಎಂದಿಗೂ...
********
ಹೊಟ್ಟೆ ಬಿರಿಯುವಂತೆ
ಉಂಡು
ಹಾಸಿ ಹೊದ್ದು
ಬೆಚ್ಚಗಿದ್ದು
ಮಲಗುವುದೇ ಜೀವನವಲ್ಲವಲ್ಲ
ಬೆವರಿ ಚರ್ಮವು
ಕಾಂತಿ ಹೊಮ್ಮಬೇಕು
ಬಿಗಿದು ಸನ್ನಿವೇಶಗಳು
ನಟನೆ ಶ್ರೇಷ್ಠವಾಗಬೇಕು
ಜೀವನ
ಸುಮ್ಮನೆ ಅನಿಸಿಕೆಗಳು
ಬದುಕಿನ ಆಟ
ಅದು ಬೇರೆಯೇ..
22/05/2015
No comments:
Post a Comment