ಸಂಜೆಯ ಈ ಮಬ್ಬುಗತ್ತಲು..
ಸಂಜೆಯ
ಈ ಮಬ್ಬುಗತ್ತಲು
ಮೋಡದ ಹವೆ
ತಂಪೆನಿಸುವ ಹಸಿರ ತೊನೆ
ಒಳಗೆಲ್ಲೋ
ಅಡಗಿ ಹೋದ
ಕಾಮನೆಗಳನ್ನು
ಹುಗಿದು ಹೊರಗೆಳೆದು
ಹರಡುತ್ತಿದೆ
ನೀ ಬರುವ ಕಾಂತಿಗೆ..
ಬಂದ ನೀನು
ಸುಮ್ಮನಿದ್ದುಬಿಡು
ಮಾತಾಡಿ
ಗಾಳಿಯ ಕೆಣಕಬೇಡ
ಕಟ್ಟಿದ ಮೋಡ ಒಡೆದಂತೆ
ಮಿಂಚು ಹರಿದು
ಮಾತು ಹೊಮ್ಮಲಿ
ಕವಿತೆಗಳಲಿ..
ಬಾಕಿಯಿದ್ದರೆ ಉಲಿ ನೀ
ಅಂಗೈಯೊಳು
ಹಸಿ ಬಿಸಿ
ಉಸಿರುಗಳ,
ನಿನ್ನ ಕನಸ
ಕಾವಿಗೆ
ರೇಖೆಗಳೂ
ಬಿಸಿಯಾಗಿ ಬಾಗುವಂತೆ!...
ಈ ಸಂಜೆ
ನಿನ್ನದೇ ನೆನಪು...
ಕೆಂಪು ಕೆನ್ನೆ ಮೇಲೆ
ಕಳೆದ ದಿನದ ಮೂಗೀಗ ಬಣ್ಣ ಕಳೆದು...
29/05/2015
No comments:
Post a Comment