Saturday, 16 May 2015

ಕವನ

ನದಿ ಸಾಗರ


ಈ ಗಂಡಿಗೆ 
ಅಹಂಮ್ಮಿನ ತೂಕ ಇಟ್ಟು 
ಇಂದು ಮನೆಯಿದೆ

ಹೆಣ್ಣಿಗೆ ನೆಲೆಯೇ ಇಲ್ಲ
ಹರಿಯುತ್ತಲೇ ಉಳಿಯಲು
ನದಿ ಎನ್ನುತ್ತಲೇ ಬಂದರು

ಅವಳು ಹರಿದು ನಿಂತ
ಅಂತ್ಯಕ್ಕೆ
ಅವನ ತಂದಿಟ್ಟರು

ಸಾಗರನೆಂದು ವಿಶಾಲಗೊಳಿಸಿ!
ವೈಶಾಲ್ಯತೆಯು 
ಹರಿದೇ ನಿಂತಿತ್ತು....

16/05/2015

No comments:

Post a Comment