ಕೋರಿಕೆ..
ನಾ ಹುಟ್ಟಿಕೊಂಡ ಕುಟೀರ
ಧಗೆಯಾಗಿಯೇ ಉಳಿಯಿತು
ಎಂದಿನಂತೆ
ನಾನೊಂದು ಅಣಬೆಯಾದರೂ ಸರಿ
ಹೊಮ್ಮುತ್ತಿರುವೆ ಹೊರಗೆ ಚಾಚಿ
ಎಂದಿನಂತೆ
ಎಲ್ಲಿಗೆ ಅಂತ್ಯವೋ ಈ ಸೆಣಸಾಟ
ಒಳಗಿನ ಬೇಗೆಯದೋ
ಕತ್ತರಿಸಿಕೊಂಡ ಬಳ್ಳಿಯದೋ..
ರೆಕ್ಕೆ ಬೆಳೆದು ಹಾರುವುದೋ
ಗಿಡುಗಗಳ ಕಣ್ಕುಕ್ಕಿನದೋ
ಧ್ಯೇಯೆಯಂತಾಗಲೀ ಈ ಅಣಬೆಯ ಬದುಕು
ಅಷ್ಟು ಸಾಕು..
ನೀರೆರೆದು ಪೋಷಿಸಿದ ದೈವವೇ..
17/04/2015
No comments:
Post a Comment