ನಿನ್ನ ಕನಸು
ನಿನ್ನ ಕನಸೆಲ್ಲಾ
ಬಹು ತಡವಾಗಿ
ಅರ್ಥ ಪಡೆಯುವುದಲ್ಲಾ!
ತುಸು ಸರಳಗೊಳಿಸಿ
ಬಿಡಿಸಿ ಹೇಳಬಾರದೇ?!
ನಾನೋ ಬಾವಿ ಕಪ್ಪೆ
ಕಾವ್ಯದ ಗಂಧವಿಲ್ಲ.
ಹಮ್ಮು ಬಿಮ್ಮಿಲ್ಲದ
ಮಣ್ಣ ಭಾಷೆಯಲ್ಲಿ
ಮಾತ ಬೀಜವನಿಟ್ಟು
ಕಾಳಜಿಯ ನೀರೆರೆದು
ಹೂ ಕಾಣಿಸಿಬಿಡು ಪೋಷಿಸಿ
ಹೂ ಬಿಡಿಸುವುದು
ಬಾಲ್ಯದ
ನನ್ನ ನೆಚ್ಚಿನ ಕೆಲಸ
ಆರಿಸಿ ಪೋಣಿಸಿ ಮುಡಿದೇನು
ಸಡಿಲಿಸು ನಿನ್ನ ಕನಸಿನರ್ಥಗಳ
ನಿಲುಕುವ ನನ್ನ ಭಾವಾರ್ಥಗಳಿಗೆ...
06/05/2015
No comments:
Post a Comment