Sunday, 31 May 2015

ಕವನ


ಆಸೆ ಆಕಾಂಕ್ಷೆಗಳು 



ಆಸೆ ಆಕಾಂಕ್ಷೆಗಳು
ಹಕ್ಕಿ ರೆಕ್ಕೆ ಮೇಲಿನ ಚಿತ್ರಗಳೇ
ಹೊರತು
ಮರದ ರೆಂಬೆ ಕೊಂಬೆಗಳ
ವೈಯ್ಯಾರದ ತೊನೆದಾಟವಲ್ಲ

ಸಿಡಿಲು ಮೋಡದೊಡಲ
ಕ್ರಾಂತಿಯೇ
ಹೊರತು
ನೆಲದ ಮೇಲಣ ಕಣ್
ರಂಜನೆಯಲ್ಲ

ಚಿಗುರು 
ಆಂತರ್ಯದ ಸೌಂದರ್ಯವೇ
ಹೊರತು
ಆಕರ್ಷಿಸುವ ಅಹಂ ಅಲ್ಲ

ಮೊಗದ ಕಾಂತಿ
ಆತ್ಮ ಸ್ಥೈರ್ಯವೇ ಹೊರತು
ಅವರಿವರ 
ಸ್ತುತಿ ನಿಂದೆಗಳ
ಸರಕಲ್ಲ

ಏರುವ ಆಗಸ
ಸಾಧನೆಯೇ ಹೊರತು
ಭೂಮಿಯಿಂದ ಛೇದಿಸಿಕೊಂಡ
ಗುರಿಯಲ್ಲ

ಹುಡುಕಾಟದ ಮೀನಿನ ರೆಕ್ಕೆ
ಜೀವನವೇ ಹೊರತು
ಹೆಜ್ಜೆ ಗುರುತು ಕೊಟ್ಟ
ಮೋಜಿನಾಟವಲ್ಲ

ಗಿರಗಿರನೆಂದು ತಿರುಗೋ
ಸುಂಟರಗಾಳಿ
ಒತ್ತರಿಸಿಕೊಂಡ ಗಾತ್ರವೇ ಹೊರತು
ಧಾಳಿಯಿಟ್ಟು ಹೊತ್ತೊಯ್ಯುವ ಹುನ್ನಾರ 
ಅಲ್ಲವೇ ಅಲ್ಲ!

30/05/2015

No comments:

Post a Comment