"ಹನಿ"
ಹನಿ (honey),
ಇಬ್ಬನಿ ,
ಮುತ್ತಿನ ಹನಿ
ಇವಿಷ್ಟನ್ನು ಎಲ್ಲಿ ನೋಡಿದರೂ
ಅದೇನೋ ಅಸೂಯೆ
ಹಸುರು ಗರಿಕೆಯಲ್ಲೋ..
ಚಂದ್ರನ ಮುಸುಕು ಸೆರಗಲ್ಲೋ
ಇಳೆ ಬಿದ್ದ ಗರಿಗಳಲ್ಲೋ
ಸ್ವಾತಿ ಮಳೆಯಲ್ಲೋ
ಆವರಿಸಿ ತಂಪನ್ನೀಯುವ
ಮಾರುತಗಳಲ್ಲೋ
ವಾಸ್ತವವೋ
ಇಲ್ಲ
ಅಲ್ಲಲ್ಲಿ ಕಂಡ
ಹೆಂಗಳೆಯರ ಪದ್ಯಗಳಲ್ಲೋ
ಅಂತೂ ಒಂಚೂರು ಒಳಗೆ ದಗೆ
ಬೆಂಕಿಯಾಡುತ್ತದೆ ಒಡಲು..
07/05/2015
No comments:
Post a Comment