ನನ್ನ ನಿಲುಗನ್ನಡಿಯ
ತುಂಬಾ
ನಾನೇ ನನ್ನ ಚಿತ್ರ
ಬಿಡಿಸಿಯಾಯ್ತು
ಇನ್ನು
ಮುಖವನ್ನೆಲ್ಲಿ
ಮುಚ್ಚಿಟ್ಟುಕೊಳ್ಳಲಿ?!
ಬಯಲಾದ
ಕನ್ನಡಿಯ ಗಂಟು!
ಹೆಚ್ಚಿನ ರಹಸ್ಯವಿಲ್ಲದೆ
ತೀರ ಮಾಮೂಲು
ಈ ಹೆಣ್ಣು!
*****
ನೀರು
ತುಂಬಿಕೊಂಡ ಆಕಾರಕ್ಕೆ
ಹೊಂದಿಕೊಳ್ಳುವುದೋ?
ಅನೇಕ ಆಕಾರಗಳಲ್ಲಿ ಹೊಮ್ಮಿ ತುಂಬಿ
ನೀರನ್ನೆ ಹೊಂದಿಕೊಳ್ಳುವ ಗುಣಕ್ಕೆ ರೂಢಿಸಿದರೋ
ಒಮ್ಮೊಮ್ಮೆ ಹೀಗೆ
ಪ್ರಶ್ನೆಗಳು
ತರ್ಕ ತಾತ್ಪರ್ಯ ವಿಜ್ಞಾನ!
02/05/2015
****
ಎಲ್ಲವನ್ನೂ ಎದುರಿಸಬೇಕು
ಎಂದುಕೊಳ್ಳುತ್ತೇನೆ
ಹೀಗೆ ಹಿಂಬದಿಯಲ್ಲಿ ನಡುಗುತ
ಅದೇಕೋ
ಎಲ್ಲವೂ
ಎದುರುಗೊಳ್ಳುತ್ತಲೇ
ಸವಾಲೊಡ್ಡುತ್ತವೆ
ನಾನೂ
ಆಗಾಗ ಹಿಂದೆ ಕುಸಿದು
ಮುಂದೆ
ಜಿಗಿಯುತ್ತೇನೆ..
ಮುಗ್ಗರಿಸಿದರೂ
ಚಿಂತೆಯಿಲ್ಲ,
ನೆಲದ ಗಟ್ಟಿತನದ ಭರವಸೆ!..
****
ಏನು ಹೇಳುವುದು
ಇನ್ನೂ ಬಾಕಿ ಇದೆಯೇ?!
ಇದ್ದರೂ
ಅವೆಲ್ಲವೂ
ನನ್ನ ತಪ್ಪೊಪ್ಪಿಗೆ..
01/05/2015
No comments:
Post a Comment