ಪ್ರೀತಿಯೆಂಬುದು
ಅಷ್ಟು ಬೇಗ ಸಾಯದು
ಘಟಿಸಿದ್ದೇ ನಿಜವಾಗಿದ್ದರೆ
ಕೊರಗಾಗಿಯಾದರೂ ಉಳಿವುದು
ಅಳಿಯದೆ;
ಎನ್ನೆದೆ ನಿನ್ನೆದೆ ಉರಿಯಂತೆ
ಆಗೊಮ್ಮೆ ಈಗೊಮ್ಮೆ ಹೊಳೆದು
ಅಲ್ಲಲ್ಲಿ ಹರಿದು
ಬಿಸಿ ತಾಗಿ ಮೆರೆದು...
***
ಕವನದಲ್ಲಿನ
ಮನದ ಹೊಳೆ ಹರಿವೇ
ಹುಡುಕಾಟ
ಕವಿ ನೀನು, ಕಣ್ಣು ನಾನು
ಓದುವೆ ಓದಿಸು
ಮನದ ಕವನ..
***
ನಾನು ಕವಿಯಾಗಲೇಬೇಕಿಲ್ಲ ಕಪಿಯಾದರೂ ಸಾಕು
ಕವಿ ಹೃದಯದಲ್ಲೊಮ್ಮೆ ಕವನವಾದರೂ ಸಾಕು
ಬದುಕೊಂದು ಕಾವ್ಯ, ಪುಟವೊಂದರಲ್ಲಾದರೂ
ನಾನೂ ನೀನು ಅಷ್ಟೇ ಆ ಕ್ಷಣದ ಬದುಕು...
17/03/2014
ಅಷ್ಟು ಬೇಗ ಸಾಯದು
ಘಟಿಸಿದ್ದೇ ನಿಜವಾಗಿದ್ದರೆ
ಕೊರಗಾಗಿಯಾದರೂ ಉಳಿವುದು
ಅಳಿಯದೆ;
ಎನ್ನೆದೆ ನಿನ್ನೆದೆ ಉರಿಯಂತೆ
ಆಗೊಮ್ಮೆ ಈಗೊಮ್ಮೆ ಹೊಳೆದು
ಅಲ್ಲಲ್ಲಿ ಹರಿದು
ಬಿಸಿ ತಾಗಿ ಮೆರೆದು...
***
ಕವನದಲ್ಲಿನ
ಮನದ ಹೊಳೆ ಹರಿವೇ
ಹುಡುಕಾಟ
ಕವಿ ನೀನು, ಕಣ್ಣು ನಾನು
ಓದುವೆ ಓದಿಸು
ಮನದ ಕವನ..
***
ನಾನು ಕವಿಯಾಗಲೇಬೇಕಿಲ್ಲ ಕಪಿಯಾದರೂ ಸಾಕು
ಕವಿ ಹೃದಯದಲ್ಲೊಮ್ಮೆ ಕವನವಾದರೂ ಸಾಕು
ಬದುಕೊಂದು ಕಾವ್ಯ, ಪುಟವೊಂದರಲ್ಲಾದರೂ
ನಾನೂ ನೀನು ಅಷ್ಟೇ ಆ ಕ್ಷಣದ ಬದುಕು...
17/03/2014
No comments:
Post a Comment