Monday 3 March 2014

ಕವನ

ಸೋತರೂ ಸೋಲದ ಸೋಲು ನನ್ನದು


ಪ್ರತೀ ಬಾರಿಯೂ
ನನ್ನ ಸಣ್ಣ ಸಂಭ್ರಮ, 
ಖುಷಿಗಳಿಗೆ ಏಳಿಗೆಗಳಿಗೆ
ತನ್ನದೇ ಆಸರೆಯೆಂದೊಂದು 
ಹೆಸರಿಡುವ ವ್ಯಕ್ತಿಗಳು 
ಸುಳ್ಳೇ ಹಿತೈಷಿಗಳಾಗಿದ್ದರು;
ಒಡೆದ ಮನಸ ಕಟ್ಟುವ ನನ್ನ ಶ್ರಮಕ್ಕೆ
'ನಿಮ್ಮಿಂದಲೇ' ಎನ್ನುವ ನನ್ನ ಸೌಜನ್ಯತೆಗೆ
ಎಲ್ಲೋ ಬಿದ್ದವರನೆತ್ತಿ ಪ್ರೇರೇಪಿಸಿದೆ ಎನುವ
ಅವರ ಅಹಂ ಮಾತನಾಡಿದ್ದೇಕೋ ಸಹಿಸಲಾಗದು

ಸ್ನೇಹಿತರು, ಇವರು,,
ಬಯಸಿ ಹತ್ತಿರಾಗುವರು, ಹಚ್ಚಿಕೊಳ್ಳುಲು ಧಿಕ್ಕರಿಸುವರು
ಹೀಗಳೆವರಿವರು ದೂರಾಗಲೆಂದು
ಸೂಕ್ಷ್ಮ ಮನಕೆ ಘಾಸಿಯಾಗುವಂತೆ ನುಡಿದು
ನೆಚ್ಚಿಕೊಳ್ಳೆನು ನಾನಿನ್ನು ಯಾರದೇ ಸಹಕಾರ ಹಸ್ತಗಳ
ಶ್ರಮವದು ನನ್ನದಷ್ಟೇ ಸತ್ಯ
ಒಳ್ಳೆಯ ಮಾತನೂ ಇನ್ನೊಬ್ಬರಿಂದ ಬಯಸದೇ..
ಕಟ್ಟುವೆ ನಾ ಮತ್ತೆ ಮತ್ತೆ ಕೆಡವಿದ ಮನಸನು
ಅಡಿಗಡಿಗೂ ತಳಿದಷ್ಟೂ....

No comments:

Post a Comment