ನನ್ನ ನಾಲ್ಕು ಉಳಿದು ಕೊಳೆವ ಸಾಲುಗಳು
ನಿನ್ನ ಬದುಕ ಹುಡುಕಾಟದ ಕವನಕೆ ತೊಡಕಾಗಿ
ನಿನ್ನೊಳ ನಾ ಒಲವಾಗೊಮ್ಮೆ ಮಿಂಚಿ
ಕಾದ ಸಂಭ್ರಮವನ್ನೂ ಸಂಭ್ರಮಿಸಲಾಗದೆ
ನಿನ್ನ ಕೊಪಾಗ್ನಿಯೊಳು ಬೆಂದು
ಕಣ್ಮರೆಯಾಗೆಂದು ನೀ ಕೊಟ್ಟ ಶಾಪಕ್ಕೆ
ನಿಜ ನಾನಿನ್ನೂ ನಿನ್ನ ವಿರಹಿ,,,
ಕನವರಿಸಿದಳವಳು ಕವನದಲಿ
ರಾಧೆ, ಶಕುಂತಲೆ ಮತ್ತಿನ್ಯಾವುದೋ
ಹೆಣ್ಣುಗಳ ಮುಖವಾಡದೊಳು....
****
ಕಣ್ಪಟ್ಟಿ ಕಟ್ಟಿಕೊಂಡಿರುವೆವು ನಾವಿಬ್ಬರು
ಒಬ್ಬರನ್ನೊಬ್ಬರು ನೋಡಬಾರದೆಂದು
ನಮ್ಮಂತಿಲ್ಲ ನಮ್ಮ ಮನಸ್ಸು,
ಮನವು ಕೈಗಿಳಿದು ಹುಡುಕುತಲಿರುವುದು
ಅನುದಿನ ನೆನ್ನೆಗಳಲಿ;
ನನ್ನುನು ನೀನು, ನಿನ್ನನು ನಾನು....
14/03/2014
***
ಕುಣಿದಂತಿಲ್ಲ ಈ ನೆಲವು
ತಗ್ಗು ಉಬ್ಬಿನಂತೆ ಹರವು
ಪ್ರಶ್ನಿಸುವ ಹಾಗಿಲ್ಲ ಏರಿಳಿತಗಳ
ಹದದೊಳು ಕುಣಿದರಷ್ಟೆ ನರ್ತನ
ಎಡವದೇ ತೊಡರದೇ ನಿಂತರೂ ಸರಿಯೇ
ಕೂರುವಂತಿಲ್ಲ ಕಾಣಲಾರದ ಕುರುಡು ಜಗದೊಳು
ತಲೆಯಾದೀತು ಪಾದಗಳಡಿಯ ನುಣ್ಣನೆ ಹಾದಿಯು..
13/03/2014
ನಿನ್ನ ಬದುಕ ಹುಡುಕಾಟದ ಕವನಕೆ ತೊಡಕಾಗಿ
ನಿನ್ನೊಳ ನಾ ಒಲವಾಗೊಮ್ಮೆ ಮಿಂಚಿ
ಕಾದ ಸಂಭ್ರಮವನ್ನೂ ಸಂಭ್ರಮಿಸಲಾಗದೆ
ನಿನ್ನ ಕೊಪಾಗ್ನಿಯೊಳು ಬೆಂದು
ಕಣ್ಮರೆಯಾಗೆಂದು ನೀ ಕೊಟ್ಟ ಶಾಪಕ್ಕೆ
ನಿಜ ನಾನಿನ್ನೂ ನಿನ್ನ ವಿರಹಿ,,,
ಕನವರಿಸಿದಳವಳು ಕವನದಲಿ
ರಾಧೆ, ಶಕುಂತಲೆ ಮತ್ತಿನ್ಯಾವುದೋ
ಹೆಣ್ಣುಗಳ ಮುಖವಾಡದೊಳು....
****
ಕಣ್ಪಟ್ಟಿ ಕಟ್ಟಿಕೊಂಡಿರುವೆವು ನಾವಿಬ್ಬರು
ಒಬ್ಬರನ್ನೊಬ್ಬರು ನೋಡಬಾರದೆಂದು
ನಮ್ಮಂತಿಲ್ಲ ನಮ್ಮ ಮನಸ್ಸು,
ಮನವು ಕೈಗಿಳಿದು ಹುಡುಕುತಲಿರುವುದು
ಅನುದಿನ ನೆನ್ನೆಗಳಲಿ;
ನನ್ನುನು ನೀನು, ನಿನ್ನನು ನಾನು....
14/03/2014
***
ಕುಣಿದಂತಿಲ್ಲ ಈ ನೆಲವು
ತಗ್ಗು ಉಬ್ಬಿನಂತೆ ಹರವು
ಪ್ರಶ್ನಿಸುವ ಹಾಗಿಲ್ಲ ಏರಿಳಿತಗಳ
ಹದದೊಳು ಕುಣಿದರಷ್ಟೆ ನರ್ತನ
ಎಡವದೇ ತೊಡರದೇ ನಿಂತರೂ ಸರಿಯೇ
ಕೂರುವಂತಿಲ್ಲ ಕಾಣಲಾರದ ಕುರುಡು ಜಗದೊಳು
ತಲೆಯಾದೀತು ಪಾದಗಳಡಿಯ ನುಣ್ಣನೆ ಹಾದಿಯು..
13/03/2014
No comments:
Post a Comment