ಎನ್ನೆದೆಯೊಳು
ಹೊಗೆಯಾಡಲು
ನಿನ್ನ ನೆನಪು....
04/03/2014
***
ಹಾರಲಾರದ ಹಕ್ಕಿ ನಾ
ಹಾರುವ ರೆಕ್ಕೆ ಕಸಿದುಕೊಂಡೆ ನೀ
ಶೋಕಿಸಿದರೂ ಹಿಂದುರಿಗಿಸಲಾರೆ ಎನಗೆ,
ತರಿದ ಮೇಲೆ ರೆಕ್ಕೆಗಿಲಿಲ್ಲ ಜೀವ
ಅದು ನಿನ್ನೊಂದಿಗಿದ್ದರೆ ಸಜೀವ
ಪಡೆದುಕೊಂಡ ಖುಷಿಯಿರಲಿ ನಿನಗೆ
ನಾನೂ ಒಮ್ಮೆ ನಸು ನಕ್ಕೇನು
ಅಲ್ಲೆಲ್ಲೋ ರೆಕ್ಕೆಗಳು ಪಟಪಟನೆಂದಾಗ,,
ನಿನ್ನ ಆಸ್ತೆಯ ಹಕ್ಕಿಯೊಳು,,,
03/03/2014
No comments:
Post a Comment