ಹಾಗೇ ಸುಮ್ಮನೆ ಹೋಳಿ ಸ್ಪೇಷಲ್..
ಬಣ್ಣ ಬಳಿದೇ ನಿಂತಿರುವೆ
ನಿನ್ನದೇ ಬಣದಲಿ
ತೇನಾಲಿ ರಾಮನನೊಮ್ಮೆ ನೆನೆದು
ಮುಖವಲ್ಲ
ಮುಖ್ಯ ನನಗೆ
ನಿನ್ನ ಸಾನಿಧ್ಯ,
ನಾನಲ್ಲದ ನಾನಾಗಿ
ನಿನ್ನ ಜೊತೆಯಾಗಿ
ಹಿತವಾಗಿ ಗಾಳಿಯಂತಾಗಿ
ಸುಳಿದಾಡುವ
ಬಯಕೆ ಹೊತ್ತಿರುವೆ
ಬದುಕಿನ ಬಣ್ಣಗಳಲಿ
ಹುಚ್ಚು ಪ್ರೀತಿಯ ಬಣ್ಣವ
ಮೊಗದೊಂದಿಗೆ ಜೀವನಕೂ ಬಳಿದು.....
ಚಿತ್ರ ಕೃಪೆ; ಅಂತರ್ಜಾಲ
No comments:
Post a Comment