ಸಂಗೀತ....
ಈ ಮಧುರ ನಾದ ಸಂಗೀತವಿರುವುದೇ ನಮ್ಮೊಳಗಿನ ಖಾಲಿತನವನ್ನೊಮ್ಮೆ ಮುಟ್ಟಿ ನಮಗೆ ನೆನಪಿಸುವ ಒಂದು
ಮಾರ್ಗವೆನೋ? ಬಹಳಷ್ಟು ಬಾರಿ ನಮ್ಮ ನೋವುಗಳನ್ನು ನಮ್ಮ ಬಿಡುವಿಲ್ಲದ ಜೀವನದಲ್ಲಿ ಮರೆತೇಬಿಟ್ಟಿರುತ್ತೇವೆ..
ಎಲ್ಲೋ ಗಾನವೊಂದು ಅಥವಾ ಮಧುರ ನಾದವೊಂದು ಕಿವಿಗೆ ಬೀಳಲು ಏಕೋ ಏನೋ ನಮ್ಮಲ್ಲೇ ನಾವೇನನ್ನೋ
ಹುಡುವಂತಹ ಅನುಭವವಾಗುತ್ತದೆ. ತಕ್ಷಣ ನಾವು ಮರೆತ ನೋವೋ ನಮ್ಮ ಖಾಲಿತನವೋ ಸವರಿಕೊಂಡಂತೆ
ಭಾಸವಾಗಿ ದಿಢೀರನೇ ಅಳು ಉಕ್ಕುವುದೂ ಇದೆ.. ಕಣ್ತೇವವಾಗಿ ಮತ್ತೂ ಮರೆಮಾಚಲೆಂದು ಸ್ಥಳದ ಬದಲಾವಣೆಯೋ
ಅಥವಾ ಆ ಟೀ ವಿ ಚಾನೆಲ್ನ ಬದಲಾವಣೆಯನ್ನೋ ಮಾಡಲು ಅವಸರಿಸುತ್ತೇವೆ..
ಅದು ಸಂಗೀತಕ್ಕಿರುವ ಶಕ್ತಿಯೋ ಏನೋ?. ಜಗದೆದುರಿನ ನಮ್ಮ ಅನಿವಾರ್ಯ ಮುಖವಾಡಗಳನ್ನು ಕಿತ್ತೊಗೆದು
ನಮ್ಮನ್ನು ನಮ್ಮಂತೆ ನಮ್ಮೇದುರೇ ತಂದು ನಿಲ್ಲಿಸಿಬಿಡುತ್ತದೆ ಸಂಗೀತ.
ಏನಾಶ್ಚರ್ಯ?!!. ದೇವನೆಂದರೇ ಸಂಗೀತವೇ ಎನ್ನುವ ಹಾಗೆ. ಯಾರಿಗೂ ಕಾಣದ್ದು ದೇವರಿಗೆ ಕಂಡಂತೆ. ನಮ್ಮ
ನೋವನ್ನು ನೆನಪಿಸುವ ಹಾಗೇಯೇ ನೋವನ್ನು ಮರೆಸುವ, ನೋವನ್ನೊಮ್ಮೆ ಅರಗಿಸಿಕೊಳ್ಳುವ ಶಕ್ತಿಯನ್ನು ಪಡೆದದ್ದೇ
ಆದರೆ ಬಹುಶಃ ಅದು ಸಂಗೀತದಿಂದ ಮಾತ್ರವೇ ಎನಿಸುತ್ತದೆ. ನಮ್ಮನ್ನು ನಮಗೆ ಕನ್ನಡಿ ಹಿಡಿದು ತೋರಿಸುವ
ಸಂಗೀತವು ನಮ್ಮನ್ನು ನಾವು ಒಪ್ಪಿಕೊಳ್ಳುವಂತೆ ಸೂಚಿಸುತ್ತದೆ ಎಂದೆನಿಸುವುದುಲ್ಲವೇ? . ಹೌದು, ನಮ್ಮನ್ನು ನಾವು
ಒಪ್ಪಿಕೊಳ್ಳದ ಹೊರತು ಈ ಜಗಕ್ಕೆ ನಮ್ಮನ್ನು ನಮ್ಮಂತೆ ಒಪ್ಪಿಸುವುದು ಅಸಾಧ್ಯ..... ನಮ್ಮ ನ್ಯೂನತೆ ಮೊದಲು ನಾವು
ಒಪ್ಪಿಕೊಳ್ಳಬೇಕಿದೆ ಹಾಗೆಯೇ ಅದನ್ನು ಮೀರಿ ಸಾಧಿಸುವ ಛಲವನ್ನೂ..
No comments:
Post a Comment