Monday, 3 March 2014






ಮಳೆ ಬಿತ್ತು ಇಂದು,
ನೆನೆದೆ ನಾ 
ನಿನ್ನೇ ನೆನೆನೆನೆದು,
ನಿಲ್ಲದೆ ನಡೆದು ಹೋದ ನಿನ್ನ
ಹೇಗೆ ಮರೆಯಲಿ?..
ಮಳೆ ಹನಿಗಳಲೂ ಹರಿಸಲಾರೆ
ಎನ್ನೆದೆಯ ಕಣ್ಣೀರ,
ಕಾದು ಹೆಪ್ಪುಗಟ್ಟಿದೆ 
ನಿನ್ನ ಕಾಣದೆ...


***


ಉಳಿಸುವುದಂತೂ ನಿಶ್ಚಯ
ಈ ಜೀವದ ಭಾವ,
ಅದು ನಿನ್ನಲ್ಲೋ, ಆ ಅನಂತದಲ್ಲೋ
ಮತ್ತೆಲ್ಲೋ ಒಂದು ಹೂವಿನಲ್ಲೋ
ಕಾಡುವ ನೆನಪಲ್ಲೋ.....


***

ಹಾಯ್ಕು :-)


ಗೌಣವೋ ಸತ್ಯ
ಮಿಥ್ಯ ಕವಿ ಕಲ್ಪನೆ 
ರಸ ಕಾವ್ಯವೋ


***


ಪ್ರೀತಿಸಬಾರದು
ಎಂದುಕೊಳ್ಳುತ್ತಿರುವಾಗಲೇ
ಪ್ರೀತಿಸಿತ್ತು
ಬದುಕು...


****


ಅಂದು ಭೀಷ್ಮನು ಯುದ್ಧ ಸೆಣೆಸಾಟವ ಬಿಟ್ಟ
ಕುರುಕ್ಷೇತ್ರದೊಳು;
ಇಂದಿನ ಸತಿಪಟ್ಟದವಳು ಬದುಕಿನ ಸೆಣೆಸಾಟವ ಬಿಟ್ಟಳು
ನ್ಯಾಯಾಲಯದೊಳು ಭೀಷ್ಮನ ನೆನೆದು,
ತ್ಯಾಗವಾದರೂ ಶೌರ್ಯವಾದರೂ
ಕಾಡಿ ಸ್ಫೂರ್ತಿಯಾಗಬೇಕು ಅಬಲೆಯೆನ್ವ
ಹೆಣ್ಣಿಗೂ ಗಾಂಗೇಯನಂತೆ...


01/03/2014

****


ಬದುಕಿನ ವಸಂತ ಕಾಲವೂ, ಸಂಧ್ಯಾ ಕಾಲವೂ
ರುದ್ರ ರಮಣೀಯ,,

ಅನುಭೂತಿ, ಅನುಭವ, ಅನುಭಾವ
ಚಿರ ಯೌವ್ವನೆ,,

ಕೊನೆಯರೆ ಘಳಿಗೆ ದುಡಿಸಿಕೊಳ್ಳೋ
ಕವಿ ಮನವದು...


28/02/2014

No comments:

Post a Comment