ಗೆಳೆಯನ ಕಾಳಜಿಯ ಬೈಗುಳವೂ
ಎಷ್ಟು ಖುಷಿ ಕೊಡುತ್ತದೆ?!
ಗೆಳೆಯನ ಗೆಳೆಯನಾಗಿಯೇ
ನೋಡುವಾಗ ಅವನಿನ್ನೂ ಆಪ್ತ!
***
ಒಲಿಸಿಕೊಳ್ಳಬೇಕಾದ್ದೇ ಮುನಿದಿರಲು
ಮಾಡಲೆಂತು;
ಸಾಗುವುದಂತೂ ಬದುಕು ಬದುಕದೇ..
11/03/2014
***
ನಾ ಯಾರನ್ನೂ ಗುರಿಮಾಡಿಟ್ಟಿರಲಿಲ್ಲ
ಅವರವರೇ ಎದುರಾಗಿ ನೆಟ್ಟುಕೊಂಡರು
ನನ್ನ ಪದಗಳನ್ನು ಚೂರಿ ಬಾಣಗಳಂತೆ
ನಾ ಅಹಿಂಸಾವಾದಿ ಗೊತ್ತಲ್ಲಾ?!!
10/03/2014
***
ಖುಷಿಯ ದಿನಗಳಿದ್ದವು ಆಗ
ನೀನಿದ್ದೆ ಎನ್ನ ಭ್ರಮೆಯಾಗಿ,
ಗ್ರಹಣವಿಳಿದಂತೆ ಕಿರಣಗಳು ರಾಚಿ
ಕಣ್ಬಿಟ್ಟು ನೋಡಲು,
ನೀನಲ್ಲದ ನೀನು ಮತ್ತಿನ್ನ್ಯಾರದೋ
ಬಂಧನದಲಿ;
ಮೋಸವೆನಲೂ ಶಕ್ತಿಯಿಲ್ಲ ಸೋತಮನ
ಮತ್ತೂ ಜರ್ಜರಿತ;
ಮೂಗಿ ನಾ
ನಿನ್ನ ಅಟ್ಟಹಾಸಕ್ಕೆ
ಹಾಗೆಯೇ ಕುರುಡಿ ನಾ
ನೀ ನೆಡೆದುಬಿಟ್ಟ ಹಾದಿಯೊಳು
ನಿನ್ನ ಹೆಜ್ಜೆ ಗುರುತ ಪತ್ತೆ ಹಚ್ಚದೆ
09/03/2014
No comments:
Post a Comment