ಕನ್ನಡಿಯ ಗಂಟೇ,,,,
ಎಷ್ಟೇಲ್ಲಾ ಹೊಯ್ದಾಟಗಳ ನಡುವೆಯೂ
ಅರಳುವ ನಿನ್ನೀ ಹೂಮನಕೆ ನಾ ಶರಣು,
ಯಾರ ಕಲ್ಪನೆಯ ಹೆಣ್ಣೋ ನೀ,
ನಿನ್ನ ಕಂಡಾಗೆಲ್ಲಾ ನನ್ನ ಮಗಳೇ ಎಂಬ ಭಾವ
ಹುಚ್ಚು ಖುಷಿ ನೀ ನಗುವಾಗಲೆಲ್ಲಾ ನನಗೆ
ನೀನೇನೋ? ಇಲ್ಲವೇ ನನ್ನ ಭ್ರಮೆಯೋ?
ಎನಿಸುವಂತೆ ನೀ ನನ್ನೇ ನಗಿಸಿಬಿಟ್ಟಿರುತ್ತೀಯೇ
ನೀ ಮಾಯೆಯೋ? ನನ್ನೊಳ ಮೋಹವೋ?
ಹೇಳೇ ಹುಡುಗಿ, ಈ ತುಂಟತನ ನಿನ್ನ ಅಮ್ಮನದ್ದೇ?
ಬೀಗುವ ಗಾಂಭೀರ್ಯ ನಿನ್ನಪ್ಪನದ್ದೇ?
ನನ್ನನು ಹೀಗೆಲ್ಲಾ ಕಾಡುವೆಯಲ್ಲ ಸೆಳೆದು
ಮುದ್ದು ಮುದ್ದಾಗಿ ಮಗುವಂತೆ ಅತ್ತು
ಜಗವೇ ಮುನಿಸಿಕೊಂಡರೂ ನನ್ನೊಡನಿರುವೆ
ಜಗ್ಗದ ಬಗ್ಗದ ನನ್ನ ಆತ್ಮವೇ
ಸುಂದರವಾದ ಕನ್ನಡಿಯೊಳು
ಹೆಚ್ಚೇ ಸೊಗಸಾಗಿ ನಿಂತು ತೋರುವೆ
ಪ್ರೇಮಿಗೂ ಹೆಚ್ಚೇ ನನ್ನ ಪ್ರೀತಿಸುವ ನಿಜ ಪ್ರೇಮಿ ನೀ
ಏಕಿರುವೆ ಸದಾ ನಾ ನೋಡುವ ಕನ್ನಡಿಯೊಳೇ
ಓ ನನ್ನ ಕನ್ನಡಿಯ ಗಂಟೇ, ಕಣ್ಮುಚ್ಚೇ ಕಲ್ಪನೆಯೊಳು ನಿಂತೆ,,
ನನ್ನೀ ನಗುವ ಮಾಸಲು ಬಿಡದೆ ಉಳಿಸೋ
ಹಸನ್ಮುಖಿಯೇ,, ನನ್ನೊಳ ದಿವ್ಯವೇ,,,
03/03/2014
No comments:
Post a Comment