Wednesday, 19 March 2014

ನೀನಲ್ಲೆಲ್ಲೋ 

ಕಾಣದೆ ತಳಮಳಿಸುವಾಗ

ನನಗಿಲ್ಲಿ 

ಸಲ್ಲದ ಕನಸುಗಳು,

ನಿಜ ಹೇಳು 

ನಿನ್ನ ಕಂಬನಿ ನನ್ನ ಸೋಕುತ್ತಿರುವುದೀ ಕ್ಷಣ ಸುಳ್ಳೇ...


***

ನೀ ಪ್ರೀತಿಯನ್ನುಲಿಯುವ ಮುನ್ನವೇ 

ನಿನ್ನನರಿತು ನಿನಗೆ ಹತ್ತಿರಾದ

ಮನವು ನನ್ನದು;

ಅದು ಕಾರಣ ನಾನಾಲಿಸುವನನ್ನೀ ಮನವು 

ನನಗಿಂತ ಸತ್ಯ 

ಈ ಮೊದಲು ; ಆನಂತರವೂ...

***

ಹಿರಿಯ ಮಕ್ಕಳೊಡ ಚರ್ಚೆಯೊಳು

ಕಳೆದು ಹೋಗಿದ್ದ ನನ್ನನ್ನೊಮ್ಮೆ

"ಮಿಸ್" ಎಂದು ಕರೆದು ನಿಂತ

ಬಾಗಿಲ ಬಳಿಯ ಪುಟ್ಟ ಕಂದನು

ನಾ ತಿರುಗುವಷ್ಟರಲ್ಲಿ,

"ಏನೂ ಇಲ್ಲ"ವೆಂದು ನಯವಾಗಿ ಉಲಿದು

ನಗುತಾ ಸಾಗುವಾಗ

ಆ ಕಂದನ ಭಯವ ಮೀರಿದ ಪ್ರೀತಿಗೆ

ನಾ ಮತ್ತೂ ಜೀವಂತ...... 


19/03/2014

***

ಜಿಗುಪ್ಸೆಯೇ ಮೂಡಿರಲು

ಬದುಕಿಗೆಲ್ಲಿಯ ನಿಲ್ದಾಣ

ದಿಕ್ಕೆಟ್ಟ ದೊಣಿ ನಾ

ನಾವಿಕನಾಗೆಯಾ ಹರನೇ...

***

ಹಸಿದ ಹುಲಿ ಹುಲ್ಲು ತಿನ್ನದು,

ಹಾಗೆಯೇ 

ಸೋತರೂ ಛಲ ಬಿಡದ ಹೆಣ್ಣು....

18/03/2014

No comments:

Post a Comment