ಮನಸು
ಆಹಾ! ಎಂತಾ ಸೊಗಸು ನಾ ಸಾಗುವ ದಾರಿಯಲ್ಲಿ ಎಂತಹ ಸೌಂದರ್ಯ ತುಂಬಿದೆ. ಇದೇನು ಕನಸೋ ನನಸೋ ಕಾಣೆ, ಅಲ್ಲಿ ನೋಡು ನವಿಲು! ಎಂದೂ ಕಾಣದ ಗರಿ ಬಿಚ್ಚಿದಾ ನವಿಲು,, ಸುಂದರ ಹಿನ್ನೆಲೆ ಹಳದಿ ಮರಗಿಡಗಳ ರಾಶಿ, ಹಾ,, ನಾನೆಲ್ಲಿ ಬಂದೆನೋ ಕಾಣೆ?!, ನಾ ಹೊರಟ್ಟಿದ್ದು ಯಾರದೋ ಪುಸ್ತಕ ಬಿಡುಗಡೆಗೆಂದು, ಈ ಆಟೋದವನು ಇಲ್ಲಿಗೇಕೆ ಕರೆದುಕೊಂಡು ಬಂದನು?!, ಸರಿ ಕೇಳಿಯೇ ಬಿಡೋಣ. "ಏನ್ರೀ ಈ ದಾರಿ ಸರಿನಾ? ಹೀಗೆ ಹೋಗ್ಬೇಕಾ?, "ಹೌದು ಮೇಡಂ ಇಂಗೇನೇ ಹೋಗೋದು, ನಾ ಕರ್ಕೊಂಡ್ ಹೋಗ್ತೀನಿ ಮೇಡಂ ಯೊಚ್ನೇ ಮಾಡ್ಬೇಡಿ" ಆಟೋದವನು ಹೇಳುತ್ತಿದ್ದಾನೆ. ನೋಡು ನೋಡುತ್ತಿದ್ದಂತೆಯೇ ರಂಗು ರಂಗಾಗುತ್ತಿದೆ ದಾರಿಯ ಆಜುಬಾಜು, ಹಳದಿ ಕೇಸರಿಯ ಹೂಗಳ ಮರಗಳು ದಾರಿಯನ್ನೆಲ್ಲಾ ಬಣ್ಣವಾಗಿಸಿದೆ. ಅಯ್ಯೋ ಜಿಂಕೆ, ಮೊಲ!! ಇದೇನು ಪ್ರಾಣಿಗಳು?! ಹತ್ತಿರಾಗುತ್ತಿದಂತೆ ನಾ ಫೇಸ್ ಬುಕ್ಕಿನಲ್ಲಿ ದಿನವೂ ಲೈಕ್ ಮಾಡುತ್ತಿದ್ದ ತರತರಹದ ಪಕ್ಷಿಗಳೂ ಇವೆ! ವಾವ್,,, ಎಷ್ಟು ಚೆಂದಾ ಮತ್ತೆ ಸಿಗುತ್ತಾ ಇಂತಹ ದೃಷ್ಯ? ಆದರೆ ಭಯವಾಗುತ್ತಿದೆ, ಆ ಪ್ರಾಣಿಗಳು ಮೇಲೆರಗಿದರೆ?, "ರೀ ಸ್ವಲ್ಪ ಫಾಸ್ಟಾಗ್ ಓಡಿಸ್ರಿ ಆಟೋನ, ಆ ಪ್ರಾಣಿಗಳು ಹತ್ತಿರ ಬಂದಾವು", ನಾನೆಂತಾ ದಡ್ ಕೆಲಸ ಮಾಡಿದೆ ನಾ ಕಾರೊಂದರಲ್ಲಿ ಬರಬೇಕಿತ್ತು, ಛೇ,,, ನಿಧಾನವಾಗಿ ಚಲಿಸುತ್ತಾ ಸೊಗಸ ಇನ್ನೂ ಸವಿಯಬಹುದಿತ್ತು; ಈ ಸುಂದರ ಅಪರೂಪದ ದೃಷ್ಯಗಳನ್ನು. ಮನಸ್ಸು ತುಂಬಾ ನಿರಾಳ ಅನಿಸ್ತಾ ಇದೆ. ಎಷ್ಟು ಖುಷಿಯಾಗ್ತಾ ಇದೆ ನಂಗೇ. ನಾನೆಂದೂ ಈ ಪಕ್ಷಿಗಳನ್ನು ಕಣ್ಣಾರೆ ನೋಡಿಯೇ ಇರಲಿಲ್ಲ. ಬಾತು, ನವಿಲು, ಅದೆಂತದ್ದೋ ಬಣ್ಣ ಬಣ್ಣದ ಹಕ್ಕಿಗಳು, ಜನ್ಮ ಸಾರ್ಥಕವಾಯ್ತು....
"ಅರೇ ಮುಂದೇನಿದೆ?" ಕೇಳಿದೆ. "ಮೇಡಂ ಇದೊಂದು ಕಾಡೋಳ ಊರು ಮೇಡಂ, ಒಂತರಾ ಕಾಡುಜನರೇ ಇವರು",
ಅಲ್ಲೊಂದು ಮನೆ ನಾವು ಅಲ್ಲಿಗೆ ಹೋದೆವು. ನಾ ಹೊರಟಾಗ ಗುರಿ ಏನಿತ್ತೋ ಈಗದು ಮರೆತಂತಿದೆ. ಅಲ್ಲಿ ಎಲ್ಲಿ ನೋಡಿದರೂ ಭಯಾನಕ ಎನ್ನುವಂತೆ ಮೈನದುಗಿಸೋ ದೃಷ್ಯ, ಯಾಕೋ ನನಗೆ ಭಯವಾಗದು. ಕೇಳುತ್ತಿದ್ದೆ "ಏನಿದು, ಯಾಕೆ ಅಂಗಳವೆಲ್ಲಾ ಕೇಸರಿ ಬಣ್ಣ, ಎನೀ ಯಂತ್ರ? ಯಾವ ಪ್ರಾಣಿ ಅದು?" ಎಂಬಿತ್ಯಾದಿ. ಆ ಮನೆಯವರೇ ಉತ್ತರಿಸುತ್ತಿದ್ದರು, ಅದು ಮನುಷ್ಯನ ದೇಹ. ಅದನ್ನು ಕಡಿಯುವ ಯಂತ್ರ. ನನಗೋ ಆಹ್,, ಎಂದೋಮ್ಮೆ ಜೀವ ಹೋಗಿ ಬಂದಂತಹ ಅನುಭವ. ಹೌದು ಅಲ್ಲಿ ಅಡಕೊತ್ತಿನ ಮಾದರಿಯ ದೈತ್ಯ ಯಂತ್ರಗಳಿದ್ದವು. ಅದರ ನಡುವೆ ದೇಹವನಿಟ್ಟು ಕತ್ತರಿಸುತ್ತಿದ್ದರು. ಈಗಾಗಲೇ ಕತ್ತರಿಸಿದ್ದ ಭಾಗಗಳು ಅಲ್ಲಿ ಇಲ್ಲಿ ಅವರಿವರ ಅಂಗಳದಲ್ಲಿದ್ದವು, ಯಂತ್ರಗಳ ಮೇಲೆ. ಒಂದೇ ದೇಹ ಹಂಚಿಕೆಯಾಗಿದ್ದವು. ನಾ ಕೇಳಿದೆ ಇದು ಕೊಲೆ ಅಲ್ಲವೇ?, ಏಕೆ ಹೀಗೆ ಮಾಡಿದ್ದು ಇದು ಅಪರಾಧ. ಅದೇಕೋ ಕಾಣೆ ಅವರೆಲ್ಲರೂ ನನ್ನ ಮಾತಿಗೆ ಗೌರವ ಕೊಟ್ಟಂತೆ ಉತ್ತರಿಸುತ್ತಿದ್ದರು. ಅವರ್ಯಾರೋ ಹಿರಿಯನೊಬ್ಬ ಹೇಳಿದ, " ತಾಯೀ ಅವನು ನಮ್ ಸಂಬಂಧನೇ, ಅವನು ತಪ್ಪು ಮಾಡಿದ್ದ, ಅದಕ್ಕೆ ಅವನಿಗೆ ಶಿಕ್ಷೆ ಕೊಟ್ಟಿದ್ದೀವಿ". ನಾ ಕೇಳಿದೆ, "ಸಾವನ್ನು ನೀಡುವ ಶಿಕ್ಷೆಯೇ? ಅವನು ಮಾಡಿದ್ದಾದರೂ ಏನು?". "ಅವನು ಸಂಬಂಧದಲ್ಲಿಯೇ ವರಸೆಯಲ್ಲದವಳನ್ನ ಹೊತ್ತೊಯ್ಯುವ ಕೆಲಸ ಮಾಡಿದ್ದ, ಅದಕ್ಕೆ ಅವನನ್ನು ಹೀಗೆ ಮಾಡಿದ್ದೀವಿ. ಹೆಣ್ಣು ಅಂದ್ರೆ ಯಾರಾದರೂ ಸರಿ ಹೆಂಡಿರಾಗಿಬಿಡಬೇಕಾ?",,,,
ಅಯ್ಯೋ ದೇವರೇ,,
ಯಾಕೋ ಸರಿ ಅನಿಸಿಬಿಟ್ಟಿತು ಆ ಘಳಿಗೆ ಅವರ ಶಿಕ್ಷೆಯ ತೀರ್ಮಾನ....
*** *** ***
ಆಹ್....
ಏನಿದು ಕನಸು,,,ಎಂತ ವಿಚಿತ್ರ ಕನಸು,,,,
ದೇವಾ...
ಬಿಕ್ಕುವಂತನಿಸಿತು ನನಗೆ ತೀರ ಸಂಕಟ, ಏನೋ ವ್ಯಥೆ,,,, ನೀರು ಕುಡಿದು ಮತ್ತೆ ಮಲಗಿದೆ.
ಹೊರಗಿನ್ನೂ ಕತ್ತಲೆಯೇ.
*** ***
ಹರ್ಷಿತ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದಳು ಕಳೆದಿರುಳು ಕಂಡ ಕನಸ್ಸನ್ನು. '' ನೋಡೇ ವಿನುತಾ, ನೆನ್ನೆ ರಾತ್ರಿ ಎಂತಾ ಕನಸು ಕಣೆ, ನೆನೆಸಿಕೊಂಡರೆ ಅದು ಕನಸೋ ಸಿನೆಮಾನೋ ಅಂತ ಅನಿಸುತ್ತೆ ಕಣೆ".
ಕಥೆ ಕೇಳಿದ ವಿನೂತಳಿಗೂ ಕಾಡಿದ ಸ್ತಬ್ಧತೆ ಬೆಚ್ಚಿಸುವಂತಿತ್ತು. ಮೌನ ಮುರಿದು ಮಾತನಾಡುವಳು. ಯಾಕೆ ಹರ್ಷಿತ? ಏನೇನೋ ಯೋಚನೇ ಮಾಡ್ತೀಯ ಕಣೆ, ಅದಕ್ಕೆ ನಿನಗೆ ಹೀಗೆಲ್ಲಾ ಕನಸು ಬೀಳೋದು. "ಇರ್ಬೋದು ಕಣೆ, ನೆನ್ನೆ ಸಂಜೆ ತುಂಬಾ ಬೇಜಾರಾಗಿದ್ದೆ,,," ಅದೇ ಗುಂಗಲ್ಲಿ ಮಲಗಿದ್ದೆ,,, ಹಾಗಾಗಿ....
ಇಬ್ಬರೂ ಓದಿದವರೆ ತುಸು ವೈಙ್ಞಾನಿಕವಾಗಿ ಕನಸನ್ನು ವಿಶ್ಲೇಷಿಸಲು ಮುಂದಾಗುತ್ತಾರೆ. ವಿನುತ ಕೇಳುತಾಳೆ, " ಮೊದಲು ನೀನು ನನ್ನ ಹತ್ತಿರ ನಿನ್ನ ಸಂಕಟವನ್ನು ಹೇಳು, ಆಗ ಗೊತ್ತಾಗುತ್ತೆ ಕನಸಿನ ಮರ್ಮ,, ". " ಸರಿ ಕಣೆ, ನಿನ್ನ ಹತ್ತಿರ ನನ್ನದೆಂತಹ ರಹಸ್ಯ, ನೆನ್ನೆ ಸಂಜೆ ಅವನು ಕಾಲ್ ಮಾಡಿದ್ದ ಕಣೆ, ಮಾತಾಡಿದ ಏನೇನೋ ಹರಟಿದ, ಸುಮ್ಮನೇ ಮಾತನಾಡುತ್ತಿರುವಂತೇ ನನಗೆ ಹೇಳಿದ,, ಎಲ್ಲವೂ ಸರಿ ಕಣೆ ನನಗ್ಯಾಕೋ ಅವ ಮೊದಲಿನಂತೆ ಅನಿಸಲಿಲ್ಲ ಕಣೆ, ನಿನಗೆ ಗೊತ್ತು ನಾ ಮನದ ಮಾತಿಗೆ ಓಗುಡುವವಳು, ಅಷ್ಟು ದಿನ ಅವನನ್ನು ಪ್ರೀತಿಸಿದ್ದೆ, ಅವನೇನೋ ಅನಿವಾರ್ಯ ಕಾರಣಕ್ಕೆ ಮತ್ತೆಲ್ಲೋ ಮದುವೆಗೆ ಮುಂದಾದ, ಅದರ ಪಶ್ಚಾತ್ತಾಪವೂ ಅವನಿಗಿದೆ ಎಂದೆಲ್ಲಾ ಅನಿಸಿ ಅವನನ್ನು ಏನೂ ಅನ್ನದೆ ಸುಮ್ಮನಿದ್ದೆ ಕಣೆ. ಆದರೆ ಅವನ ನಿರೀಕ್ಷೆಯು ನನ್ನನು ದಿಗ್ಭ್ರಮೆಗೊಳಿಸಿತು,,, ಅವ ಕೇವಲ ನಾನೊಂದು ಹೆಣ್ಣು ಅದಕ್ಕಾಗಿ ಮಾತನಾಡುತ್ತಿದ್ದಾನೆ ಎಂದಷ್ಟೇ ಅನಿಸಿಬಿಟ್ಟಿತು. ಬೇಕಿರಲಿಲ್ಲ ನನಗಂತಹ ಒಂದು ಬಂಧ. ಅವ ನನ್ನೀ ಮನದೊಳು ಬಂದಾಗ ತುಂಬಾ ಹರ್ಷಿಸಿದ್ದೆ, ನನ್ನನ್ನಷ್ಟೇ ತುಂಬಾ ಪ್ರೀತಿಸುವವ ನನಗೆ ಸಿಕ್ಕನೆಂದು. ಆದರೆ ಆತನೀಗ ಯಾಕೋ ನನ್ನನೇ ತಪ್ಪಾಗಿ ಅರ್ಥೈಸಿಕೊಂಡು, ನನ್ನ ವಿನಮ್ರತೆಯನ್ನು ನನ್ನ ದೌರ್ಬಲ್ಯವೆಂದು ತಿಳಿದನೇ ಎಂದು ತುಂಬಾ ಸಂಕಟವಾಯಿತು ಕಣೆ". ಅಳುವಳು ಹರ್ಷಿತ.. ಕೆಲ ಕಾಲ ಮೌನ ಇಬ್ಬರಲ್ಲೂ.....
ಸಂಕಟವೇ ಕನಸಾಗಿ ಮೂಡಿದೆ ಎಂಬುದಕ್ಕೆ ಇಬ್ಬರಲ್ಲೂ ಒಮ್ಮತವಿದೆ....
18/03/2014
ಆಹಾ! ಎಂತಾ ಸೊಗಸು ನಾ ಸಾಗುವ ದಾರಿಯಲ್ಲಿ ಎಂತಹ ಸೌಂದರ್ಯ ತುಂಬಿದೆ. ಇದೇನು ಕನಸೋ ನನಸೋ ಕಾಣೆ, ಅಲ್ಲಿ ನೋಡು ನವಿಲು! ಎಂದೂ ಕಾಣದ ಗರಿ ಬಿಚ್ಚಿದಾ ನವಿಲು,, ಸುಂದರ ಹಿನ್ನೆಲೆ ಹಳದಿ ಮರಗಿಡಗಳ ರಾಶಿ, ಹಾ,, ನಾನೆಲ್ಲಿ ಬಂದೆನೋ ಕಾಣೆ?!, ನಾ ಹೊರಟ್ಟಿದ್ದು ಯಾರದೋ ಪುಸ್ತಕ ಬಿಡುಗಡೆಗೆಂದು, ಈ ಆಟೋದವನು ಇಲ್ಲಿಗೇಕೆ ಕರೆದುಕೊಂಡು ಬಂದನು?!, ಸರಿ ಕೇಳಿಯೇ ಬಿಡೋಣ. "ಏನ್ರೀ ಈ ದಾರಿ ಸರಿನಾ? ಹೀಗೆ ಹೋಗ್ಬೇಕಾ?, "ಹೌದು ಮೇಡಂ ಇಂಗೇನೇ ಹೋಗೋದು, ನಾ ಕರ್ಕೊಂಡ್ ಹೋಗ್ತೀನಿ ಮೇಡಂ ಯೊಚ್ನೇ ಮಾಡ್ಬೇಡಿ" ಆಟೋದವನು ಹೇಳುತ್ತಿದ್ದಾನೆ. ನೋಡು ನೋಡುತ್ತಿದ್ದಂತೆಯೇ ರಂಗು ರಂಗಾಗುತ್ತಿದೆ ದಾರಿಯ ಆಜುಬಾಜು, ಹಳದಿ ಕೇಸರಿಯ ಹೂಗಳ ಮರಗಳು ದಾರಿಯನ್ನೆಲ್ಲಾ ಬಣ್ಣವಾಗಿಸಿದೆ. ಅಯ್ಯೋ ಜಿಂಕೆ, ಮೊಲ!! ಇದೇನು ಪ್ರಾಣಿಗಳು?! ಹತ್ತಿರಾಗುತ್ತಿದಂತೆ ನಾ ಫೇಸ್ ಬುಕ್ಕಿನಲ್ಲಿ ದಿನವೂ ಲೈಕ್ ಮಾಡುತ್ತಿದ್ದ ತರತರಹದ ಪಕ್ಷಿಗಳೂ ಇವೆ! ವಾವ್,,, ಎಷ್ಟು ಚೆಂದಾ ಮತ್ತೆ ಸಿಗುತ್ತಾ ಇಂತಹ ದೃಷ್ಯ? ಆದರೆ ಭಯವಾಗುತ್ತಿದೆ, ಆ ಪ್ರಾಣಿಗಳು ಮೇಲೆರಗಿದರೆ?, "ರೀ ಸ್ವಲ್ಪ ಫಾಸ್ಟಾಗ್ ಓಡಿಸ್ರಿ ಆಟೋನ, ಆ ಪ್ರಾಣಿಗಳು ಹತ್ತಿರ ಬಂದಾವು", ನಾನೆಂತಾ ದಡ್ ಕೆಲಸ ಮಾಡಿದೆ ನಾ ಕಾರೊಂದರಲ್ಲಿ ಬರಬೇಕಿತ್ತು, ಛೇ,,, ನಿಧಾನವಾಗಿ ಚಲಿಸುತ್ತಾ ಸೊಗಸ ಇನ್ನೂ ಸವಿಯಬಹುದಿತ್ತು; ಈ ಸುಂದರ ಅಪರೂಪದ ದೃಷ್ಯಗಳನ್ನು. ಮನಸ್ಸು ತುಂಬಾ ನಿರಾಳ ಅನಿಸ್ತಾ ಇದೆ. ಎಷ್ಟು ಖುಷಿಯಾಗ್ತಾ ಇದೆ ನಂಗೇ. ನಾನೆಂದೂ ಈ ಪಕ್ಷಿಗಳನ್ನು ಕಣ್ಣಾರೆ ನೋಡಿಯೇ ಇರಲಿಲ್ಲ. ಬಾತು, ನವಿಲು, ಅದೆಂತದ್ದೋ ಬಣ್ಣ ಬಣ್ಣದ ಹಕ್ಕಿಗಳು, ಜನ್ಮ ಸಾರ್ಥಕವಾಯ್ತು....
ಅಲ್ಲೊಂದು ಮನೆ ನಾವು ಅಲ್ಲಿಗೆ ಹೋದೆವು. ನಾ ಹೊರಟಾಗ ಗುರಿ ಏನಿತ್ತೋ ಈಗದು ಮರೆತಂತಿದೆ. ಅಲ್ಲಿ ಎಲ್ಲಿ ನೋಡಿದರೂ ಭಯಾನಕ ಎನ್ನುವಂತೆ ಮೈನದುಗಿಸೋ ದೃಷ್ಯ, ಯಾಕೋ ನನಗೆ ಭಯವಾಗದು. ಕೇಳುತ್ತಿದ್ದೆ "ಏನಿದು, ಯಾಕೆ ಅಂಗಳವೆಲ್ಲಾ ಕೇಸರಿ ಬಣ್ಣ, ಎನೀ ಯಂತ್ರ? ಯಾವ ಪ್ರಾಣಿ ಅದು?" ಎಂಬಿತ್ಯಾದಿ. ಆ ಮನೆಯವರೇ ಉತ್ತರಿಸುತ್ತಿದ್ದರು, ಅದು ಮನುಷ್ಯನ ದೇಹ. ಅದನ್ನು ಕಡಿಯುವ ಯಂತ್ರ. ನನಗೋ ಆಹ್,, ಎಂದೋಮ್ಮೆ ಜೀವ ಹೋಗಿ ಬಂದಂತಹ ಅನುಭವ. ಹೌದು ಅಲ್ಲಿ ಅಡಕೊತ್ತಿನ ಮಾದರಿಯ ದೈತ್ಯ ಯಂತ್ರಗಳಿದ್ದವು. ಅದರ ನಡುವೆ ದೇಹವನಿಟ್ಟು ಕತ್ತರಿಸುತ್ತಿದ್ದರು. ಈಗಾಗಲೇ ಕತ್ತರಿಸಿದ್ದ ಭಾಗಗಳು ಅಲ್ಲಿ ಇಲ್ಲಿ ಅವರಿವರ ಅಂಗಳದಲ್ಲಿದ್ದವು, ಯಂತ್ರಗಳ ಮೇಲೆ. ಒಂದೇ ದೇಹ ಹಂಚಿಕೆಯಾಗಿದ್ದವು. ನಾ ಕೇಳಿದೆ ಇದು ಕೊಲೆ ಅಲ್ಲವೇ?, ಏಕೆ ಹೀಗೆ ಮಾಡಿದ್ದು ಇದು ಅಪರಾಧ. ಅದೇಕೋ ಕಾಣೆ ಅವರೆಲ್ಲರೂ ನನ್ನ ಮಾತಿಗೆ ಗೌರವ ಕೊಟ್ಟಂತೆ ಉತ್ತರಿಸುತ್ತಿದ್ದರು. ಅವರ್ಯಾರೋ ಹಿರಿಯನೊಬ್ಬ ಹೇಳಿದ, " ತಾಯೀ ಅವನು ನಮ್ ಸಂಬಂಧನೇ, ಅವನು ತಪ್ಪು ಮಾಡಿದ್ದ, ಅದಕ್ಕೆ ಅವನಿಗೆ ಶಿಕ್ಷೆ ಕೊಟ್ಟಿದ್ದೀವಿ". ನಾ ಕೇಳಿದೆ, "ಸಾವನ್ನು ನೀಡುವ ಶಿಕ್ಷೆಯೇ? ಅವನು ಮಾಡಿದ್ದಾದರೂ ಏನು?". "ಅವನು ಸಂಬಂಧದಲ್ಲಿಯೇ ವರಸೆಯಲ್ಲದವಳನ್ನ ಹೊತ್ತೊಯ್ಯುವ ಕೆಲಸ ಮಾಡಿದ್ದ, ಅದಕ್ಕೆ ಅವನನ್ನು ಹೀಗೆ ಮಾಡಿದ್ದೀವಿ. ಹೆಣ್ಣು ಅಂದ್ರೆ ಯಾರಾದರೂ ಸರಿ ಹೆಂಡಿರಾಗಿಬಿಡಬೇಕಾ?",,,,
ಅಯ್ಯೋ ದೇವರೇ,,
ಯಾಕೋ ಸರಿ ಅನಿಸಿಬಿಟ್ಟಿತು ಆ ಘಳಿಗೆ ಅವರ ಶಿಕ್ಷೆಯ ತೀರ್ಮಾನ....
*** *** ***
ಆಹ್....
ಏನಿದು ಕನಸು,,,ಎಂತ ವಿಚಿತ್ರ ಕನಸು,,,,
ದೇವಾ...
ಬಿಕ್ಕುವಂತನಿಸಿತು ನನಗೆ ತೀರ ಸಂಕಟ, ಏನೋ ವ್ಯಥೆ,,,, ನೀರು ಕುಡಿದು ಮತ್ತೆ ಮಲಗಿದೆ.
ಹೊರಗಿನ್ನೂ ಕತ್ತಲೆಯೇ.
*** ***
ಹರ್ಷಿತ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದಳು ಕಳೆದಿರುಳು ಕಂಡ ಕನಸ್ಸನ್ನು. '' ನೋಡೇ ವಿನುತಾ, ನೆನ್ನೆ ರಾತ್ರಿ ಎಂತಾ ಕನಸು ಕಣೆ, ನೆನೆಸಿಕೊಂಡರೆ ಅದು ಕನಸೋ ಸಿನೆಮಾನೋ ಅಂತ ಅನಿಸುತ್ತೆ ಕಣೆ".
ಸಂಕಟವೇ ಕನಸಾಗಿ ಮೂಡಿದೆ ಎಂಬುದಕ್ಕೆ ಇಬ್ಬರಲ್ಲೂ ಒಮ್ಮತವಿದೆ....
18/03/2014
No comments:
Post a Comment