Saturday, 15 March 2014

ಕವನ

ಹೊಯ್ದಾಟ


ಈಗೀಗ ಮೂಡುತ್ತಿರುವ ಸ್ತಬ್ಧತೆಗೆ ಬೆಚ್ಚಿಸುವಂತ ಶಕ್ತಿಯಿದೆ
ಛೇ, ನಾನೇ ನನ್ನನು ಹೀಗಳೆವಂತೆ
ರೋಧನೆಯೇ ಮರೆತವಳಿಗೆ ರೋಧಿಸಿ ಕೆಣಕಿದಂತೆ
ಸಹ್ಯವಾಗದ ನನ್ನೀ ನಾನು ಕಳೆವುದೆಂತೋ ಈ ಅವಧಿಯೊಳು

ಚೆಂದದ ಭಾವವನ್ನೊಮ್ಮೆ ಚದುರಿಸಿದ್ದೆ ಭಾವುಕ ವೇದಿಕೆಯಲಿ
ಮತ್ತದೆ ಸುಂಟರ ಗಾಳಿಯಂತಾವರಿಸಿ ಸುಳಿಯೊಳು ಸಿಲುಕಿಸಿ
ಬದುಕಿನ ಮುಂದೊಮ್ಮೆ ಅದೇ ಕವಲು ಮುನ್ನ ದಾರಿ
ಭಾವುಕವೊಂದಾದರೆ ನೋವಿನೊಡ ನಿರ್ಭಾವುಕವೊಂದು ಹುಸಿನಗೆಯೊಡ

ನಡೆಯುವುದೇ ಧ್ಯೇಯವಾಗಿದ್ದರೆ ಮನಸದೋ ಮುಳ್ಳು ಮೆಟ್ಟಿದ ಹೂ
ನೆಟ್ಟಿದ್ದಾಗಿದೆ ವಿಷವೇರುವವರೆಗೂ ಜೀವನವಿದೆ ತುಸುವಾದರೂ
ನಕ್ಕು ಹಗುರಾಗಬೇಕು ನನ್ನನೇ ನಾ ಅಪಹಾಸ್ಯಕ್ಕೊಡ್ಡಾದರೂ
ಮತ್ತೊಮ್ಮೆ ಬಿಕ್ಕುತ ಕರಗುತ ಹೂ ಪಕಳೆಗಳ ಬೀಳ್ಕೊಡುಗೆಗಳಿಗಿಂದು

ಮನವಿರಬೇಕಂತೆ ಭಾವ ಅದರಳು ತುಂಬಿ ಚಿಮ್ಮತ
ಸಲ್ಲದದು ಭಾವುಕತೆಯೊಳು ಆ ಮನವೇ ಸಾವ ಕಾಣ್ವ ದುಃಸ್ಥಿತಿಗೆ
ಸೋಲಿಗಂಜದೆ ನಿಷ್ಠೆಯ ಮೆರೆಯುತ ತನ್ನಲ್ಲೇ ತಾನೊಂದು ಮಾದರಿಯಂತೆ
ಮನಸನು ರಮಿಸುವ ಸಂಗಾತಿಯಾಗಬೇಕಿದೆ ಆತ್ಮಕ್ಕೊಂದು ಗೌರವ ಸೂಚಿಸುತ..


01/03/2014

No comments:

Post a Comment