Saturday, 8 March 2014

ಕೊಲುವವನಿಗಿಂತ ಕಾಯುವವ ಮೇಲು
ಹಾಗಾಗಿ ನಾ ಸಹಿಸಲು ಸಿದ್ಧ ನೋವುಗಳನ್ನೆಲ್ಲಾ
ಎದುರೊಂಡ ನಂಬಿಕೆಗಳನ್ನೆಲ್ಲಾ ನಂಬಿಬಿಡಲು
ಕಾಯುವವನಿದ್ದಾನೆ ನನ್ನ ಸುತ್ತಮುತ್ತಲೇ,, ಎಲ್ಲೋ,,
ಕಣ್ಣಿಗೆ ಕಂಡಂತೆ ಸ್ನೇಹಿತರು, ಹಿರಿಯರು, ತನ್ನವರು
ದಾರಿ ಮಧ್ಯೆ ಅಪರಿಚಿತ ಕಣ್ಗಳೂ ಒಮ್ಮೊಮ್ಮೆ ಕಣ್ಗಾವಲು....
ಕಣ್ಕಟ್ಟಿದ ನಂಬಿಕೆಯಲ್ಲ ನನ್ನದು ಅದಕೆ ನಾ ಮುಡಿಪಿಡುವೆ
ಗುಣವದು ಸುಗುಣಕ್ಕೆ, ಮನವದು ನಿರ್ಮಲಕ್ಕೆ, 
ಧ್ಯೇಯವದು ನಿಸ್ವಾರ್ಥಕ್ಕೆ, ನುಡಿಗಳವು ಶಿವ ಪ್ರೀತಿ ಸತ್ಯಕ್ಕೆ


08/03/2014

No comments:

Post a Comment