ಕವನ
ಗೆಜ್ಜೆ ಕಟ್ಟಿದ್ದು ನನಗಾಗಿ,
ನನ್ನ ಕುಣಿವ ಮನಕ್ಕಾಗಿ
ಹೆಜ್ಜೆ ಹಾಕಿದ್ದು ಪದಕ್ಕಾಗಿ,
ಒಳಗೊಳ್ಳೋ ಭಾವಕ್ಕಾಗಿ
ಬಳೆಗಳವು ಗಲಗಲನೆಂಬೋ ಉಸಿರಿಗಾಗಿ,
ನನ್ನ ತಾಗೋ ದೃಷ್ಟಿಗಾಗಿ
ತಿರುಗಿಸೋ ಕೈ ಹೆಚ್ಚು ನುಲಿದಿದ್ದು ಸಂಜೆಗಾಳಿಯ ತಂಪಿಗಾಗಿ,
ಹೆರಳೊಳಾಡುವ ನೆಪಕ್ಕಾಗಿ
ಸಿಂಗಾರ ಬಿಂದಿಯದು ಬಯಲ ದೀಪಕ್ಕಾಗಿ,
ಹಾರೋ ಹುಬ್ಬುಗಳ ಕಾವಲಿಗಾಗಿ
ತೂಗುಯ್ಯಾಲೆಯ ಮುತ್ತಿನೋಲೆಯನಿಟ್ಟೆ ಮುಂಗುರುಳಿಗೆ ಜೊತೆಯಾಗಿ,
ಮತ್ತಿನ ಮುತ್ತಿಗಾಗಿ
ಚುಕ್ಕಿಯಂತ ಮೂಗುತಿಯನಿಟ್ಟೆ ಹೆಣ್ತನಕ್ಕಾಗಿ,
ಮಣ್ಣೊಳೂ ನನ್ನೊಂದಿಗಿರುವ ಭರವಸೆಯ ಸಂಗಾತಿಗಾಗಿ...
06/03/2014
No comments:
Post a Comment