Thursday, 13 March 2014


ನೀ ಬಂದದ್ದ ನಾ ನೋಡಿದೆ
ನೋಡದಂತೆಯೇ ಸುಮ್ಮನಾದೆ
ನೀ ಬಂದದ್ದಾದರೂ ನಿನಗಾಗಿ
ನನಗಾಗಿದ್ದರೆ ನಾನಿದ್ದಲ್ಲಿಗೆ ಬರುತ್ತಿದ್ದೆ
ಬಯಸಿ ಬೇಡಿ ನನ್ನಲ್ಲೇ ಉಳಿಯುತ್ತಿದ್ದೆ
ಕೇವಲ ನನ್ನವನ್ನಾಗಿ
ಬಂಧಗಳಾಚೆ ಬಾನೇರಿ ನನ್ನ ಚಂದಿರನಾಗಿ...


***


ಪ್ರತೀ ಬಾರಿಯೂ 
ಒಂದೊಂದು ಅರ್ಥವ ಕೊಡುತ್ತಾ
ಒಂದು ಘಟ್ಟದಲ್ಲಿ ಸಂಪೂರ್ಣ ಅರಿತಂತೆ
ಸಂತಸವ ನೀಡಿ,
ಮತ್ತೂ ಸೆಳೆದು ಓದಿಸಿಕೊಳ್ಳೊ 
ಸಾಲುಗಳೇ ಕವನ
ಹಾಗೆಯೇ;
ಅರ್ಥವಾಗದೇ ಕಂಡು ಅರ್ಥೈಸೊ
ಸಂಕೀರ್ಣ ಕವಿಮನ...


13/03/2014

No comments:

Post a Comment