Saturday 15 March 2014

ಈ ಬಣ್ಣದ ಹಬ್ಬಕೆ
ನಿನ್ನ ಬಣ್ಣದೊಂದೇ 
ಕೊರತೆ,,
ಬಿಳಿಪೇರಿದ ಮುಖದೊಳು
ಹುಡುಕಲೆಲ್ಲಿ ನಿನ್ನನು?!.. 


***

ಅವರಿವರ ದೊಡ್ಡ ಹಂಡೆಯ 
ಖಾಲಿತನದ ಸದ್ದಿಗಿಂತ
ಪುಟ್ಟದೊಂದು ತುಂಬಿದ 
ಬಿಂದಿಗೆ ಲೇಸು,
ಆದರದೂ ದುರ್ಲಭ 
ತುಂಬಿಕೊಳ್ಳೋ 
ಪ್ರವೃತ್ತಿಯ ಕೊರತೆ 
ಎಲ್ಲೆಲ್ಲೂ....


15/03/2014

***

ಆ ಮಬ್ಬುಗತ್ತಲಲ್ಲಿ ಕುಳಿತು
ಭಾವದುಂಬಿ ಬರೆದ ಸಾಲುಗಳನ್ನೋದುವಾಗ
ಹೌದು ಮರೆತೇಬಿಟ್ಟಿದ್ದೆ ನನ್ನೇ ನಾ,
ಪ್ರೀತಿಯಲಿ ತೇಲಿ, ವಿರಹದಲಿ ಉರಿದು,
ತಿರಸ್ಕಾರದಲಿ ಕೊರಗಿ,
ಬೆನ್ನೊಳ ಚೂರಿಯಾದ ಹುನ್ನಾರಕೆ ಆವೇಗಗೊಂಡು,
ಭಾವದೊಳು ಭಾವವಾಗಿ ಹೊರಹೊಮ್ಮುವಾಗ ಉಕ್ಕಿ,
ಮರು ಕ್ಷಣ ವಾಸ್ತವಕ್ಕಿಳಿದು ಖಿನ್ನಳಾಗಿದ್ದೂ ಇದೆ,
ನಾಟಕದ ಸಂಭಾಷಣೆಯೇ ಎನುವಂತೆ ನಾಚಿದ್ದೂ ಇದೆ,
ಕೊನೆಗಷ್ಟು ನಿರುಮ್ಮಳ ಮನ, 
ಸಲ್ಲಿಸಿದಂತೆ ಬಹುದಿನಗಳ ವೇದನೆಗೆ ತರ್ಪಣ...


14/03/2014

No comments:

Post a Comment