Wednesday, 15 April 2015

ಕವನ

ನದಿ


ಬತ್ತುವವರೆಗೂ ನದಿ
ಹರಿಯುತ್ತಲೇ ಉಳಿವುದು
ಆಗೊಮ್ಮೆ ಈಗೊಮ್ಮೆ
ಅಲ್ಲಲ್ಲಿ ಅಣೆಕಟ್ಟುಗಳು
ತಡೆದು ತುಂಬಿಕೊಂಡು
ಮತ್ತೂ ಹಿಡಿಯಲಾರದೆ
ಬಿಟ್ಟುಬಿಡುವವು
ಹೀಗೆ ಹರಿದು ಬಿಡಲು....
ನದಿಯೆಂದರೆ ನನಗಿಷ್ಟ
ಅದರೊಟ್ಟಿಗೆ ಹರಿದು ಬಿಡಲು...
ತಿಳಿಗೊಳ್ಳುತಾ ನಡೆದು...

12/04/2015

No comments:

Post a Comment