ಕಾವ್ಯ ಪ್ರೀತಿ
ಯಾರಿಗೆ ಯಾರ ನೆನಪೋ
ಹೆಸರಿಸದೆ ಗೀಚುವರು ಕವನ
ಮುಟ್ಟುವುದು ಗಲ್ಲಿಗಲ್ಲಿಯೂ
ಮತ್ತಿನ್ಯಾರದೋ ಹೆಸರಿಗೆ
ಅಲ್ಲಷ್ಟು ಪುಳಕಗಳು
ಸುಮ್ಮನೆ ಹೆಗ್ಗಳಿಕೆಗಳು
ಇದೊಂದು
ಅನಾಮಿಕ ಕವಿತೆ
ಇಟ್ಟರೆ ಅವನ ಹೆಸರಿನದೇ..
ಮನಸಾರೆ ಗುನುಗಿದವನು ಮಾತ್ರ
ಕವಿತೆಯ ಗರ್ಭಕ್ಕಿಳಿವನು...!
ಭಾವುಕ ಮನದೊಳು
ತನ್ನ ಬಿಂಬ ಕಾಣುವನು
ಕವನಕ್ಕೆ ಪ್ರೀತಿಯಿದೆ
ಈಗದು ಎದೆಯಲ್ಲಿದೆ
ಕಾವ್ಯ ಪ್ರೀತಿ
ಹೀಗೂ ಉಂಟು..!!
27/03/2015
No comments:
Post a Comment