Sunday, 12 April 2015

ಕವನ

ನನ್ನವರು

ಮರೀಚಿಕೆಯ ಆಸೆಗೆ
ಮರುಳುಗಾಡಿನಲ್ಲಿಯೇ ಉಳಿದದ್ದು
ನನ್ನ ತಪ್ಪು
ತೆವಳಿ ಹೊರ ಬರುವ
ಸಾಮರ್ಥ್ಯವ ಮರೆತು..

ಹೊರ ಬಂದೆನಷ್ಟೆ
ಬಯಲು ಬಯಲು
ಮರಳಿಲ್ಲ ಹಾಗೆಯೇ ಮನೆಯೂ
ಮನದ ತುಂಬಾ ತುಂಬಿಕೊಳ್ಳೋ
ನನ್ನವರು..
08/04/2015

No comments:

Post a Comment